ಕಡಬದ ಕಳಾರದಲ್ಲಿ ವೃದ್ದನಿಗೆ ಕಾರು ಡಿಕ್ಕಿ : ಗಾಯಾಳುವನ್ನು ಆಸ್ಪತ್ರೆ ಗೆ ದಾಖಲಿಸಿ ನಾಪತ್ತೆಯಾದ ವಾಹನ ಚಾಲಕ!

ಕಡಬದ ಕಳಾರದಲ್ಲಿ ವೃದ್ದನಿಗೆ ಕಾರು ಡಿಕ್ಕಿ : ಗಾಯಾಳುವನ್ನು ಆಸ್ಪತ್ರೆ ಗೆ ದಾಖಲಿಸಿ ನಾಪತ್ತೆಯಾದ ವಾಹನ ಚಾಲಕ!

Kadaba Times News
0
ಕಡಬ ಟೈಮ್ಸ್: ಅಪರಿಚಿತ ವೃದ್ದರೋರ್ವರಿಗೆ ಡಿಕ್ಕಿ ಹೊಡೆದು ಬಳಿಕ ಅದೇ ವಾಹನದಲ್ಲಿ ಗಾಯಾಳುವನ್ನು ಕಡಬ ಆಸ್ಪತ್ರೆ ಗೆ ದಾಖಲಿಸಿ ಬಳಿಕ ವಾಹನ ಚಾಲಕರ ಡಿಕ್ಕಿ ಹೊಡೆದಕಾರು ಸಮೇತ ನಾಪತ್ತೆಯಾಗಿದ್ದ ಘಟನೆ ಸೆ.26ರಂದು ನಡೆದಿದೆ. 

ಗಾಯಾಳು ಅಪರಿಚಿತ ವೃದ್ದ ವ್ಯಕ್ತಿಯನ್ನು ಕಡಬದಿಂದ ಹೆಚ್ಚಿನ ಚಿಕಿತ್ಸೆಗಾಗಿ  ಪುತ್ತೂರು ಆಸ್ಪತ್ರೆ ಗೆ ಕೊಂಡೊಯ್ಯಲಾಗಿದೆ. 

ಕಳಾರದಲ್ಲಿ ಕುಟ್ರುಪಾಡಿ  ಕಡೆಯಿಂದ ವೇಗವಾಗಿ ಬಂದ   ವಾಹನ ಮುಖ್ಯ ರಸ್ತೆಗೆ ಏಕಾಏಕಿ  ಪ್ರವೇಶಿಸಿತ್ತು. ಈ ವೇಳೆ ಕಡಬದಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಇಕೋ ವಾಹನ ಅಪಘಾತ ತಪ್ಪಿಸಲು ಯತ್ನಿಸಿದ ವೇಳೆ ಅಲ್ಲೇ ರಸ್ತೆ ಬದಿಯಲ್ಲಿದ್ದ  ಪಾದಚಾರಿ ವೃದ್ದರಿಗೆ ಡಿಕ್ಕಿ  ಹೊಡೆದಿದೆ. 

ಕೂಡಲೇ  ಗಾಯಗೊಂಡ ವೃದ್ದನನ್ನು  ಸ್ಥಳೀಯರ ಸಹಕಾರದೊಂದಿಗೆ ಅದೇ ವಾಹನದಲ್ಲಿ ಅದರ ಚಾಲಕ ಕಡಬ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ದೂರವಾಣಿ ಸಂಖ್ಯೆ ನೀಡಿ ತೆರಳಿದ್ದರು. ವಾರಸುದಾರರಿಲ್ಲದ ವೃದ್ದರನ್ನು ಪ್ರಥಮ ಚಿಕಿತ್ಸೆ ನೀಡಿ ಪುತ್ತೂರಿಗೆ ಕಳುಹಿಸಲಾಗಿದೆ. 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top