ಸುಬ್ರಹ್ಮಣ್ಯ: ಗುತ್ತಿಗಾರಿನಲ್ಲಿ ಕೊರಗಜ್ಜನ ಕಟ್ಟೆಯಲ್ಲಿದ್ದ ಬೆಳ್ಳಿ, ತಾಮ್ರದ ಮುಟ್ಟಾಳೆ ಕಳವು

ಸುಬ್ರಹ್ಮಣ್ಯ: ಗುತ್ತಿಗಾರಿನಲ್ಲಿ ಕೊರಗಜ್ಜನ ಕಟ್ಟೆಯಲ್ಲಿದ್ದ ಬೆಳ್ಳಿ, ತಾಮ್ರದ ಮುಟ್ಟಾಳೆ ಕಳವು

Kadaba Times News
0

ಕಡಬ ಟೈಮ್ಸ್ (KADABA TIMES) :ಸುಬ್ರಹ್ಮಣ್ಯ: ಇಲ್ಲಿನ ಠಾಣಾ ವ್ಯಾಪ್ತಿಯ   ಗುತ್ತಿಗಾರಿನ ಚತ್ರಪ್ಪಾಡಿ ಕೊರಗಜ್ಜನ ಕಟ್ಟೆಯಲ್ಲಿ ಮೇ 29 ರಾತ್ರಿ ಕಳವು ಪ್ರಕರಣ ನಡೆದಿದೆ.



ಕಟ್ಟೆಯಲ್ಲಿ ದೇವರ ಸೇವೆಗೆ ಬಳಸಲಾಗುತ್ತಿದ್ದ ಬೆಳ್ಳಿ ಮತ್ತು ತಾಮ್ರದ ಮುಟ್ಟಾಳೆಗಳನ್ನು ಅಪರಿಚಿತ ವ್ಯಕ್ತಿಗಳು ಕಳವು ಮಾಡಿರುವುದು ಕಂಡು ಬಂದಿದೆ   ಬಗ್ಗೆ  ಕೊರಗಜ್ಜ ಸನ್ನಿದಾನದ ಆಡಳಿತ ಮಂಡಳಿಯ ಸದಸ್ಯರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ


ಘಟನೆ ನಡೆದ ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ .ಕಳವುಗೊಂಡ ಮುಟ್ಟಾಳೆಗಳು ಕೊರಗಜ್ಜನ ನೇಮೋತ್ಸವ ಸಂದರ್ಭದಲ್ಲಿ ಬಳಸಲಾಗುತ್ತಿತ್ತು.


ಈ ಕಳ್ಳತನ  ಕೃತ್ಯ ಭಕ್ತರಲ್ಲಿ ಆಘಾತ ಮೂಡಿಸಿದ್ದು, ಅಪರಾಧಿಗಳನ್ನು ತಕ್ಷಣವೇ ಪತ್ತೆಹಚ್ಚಿ  ಕ್ರಮ ಕೈಗೊಳ್ಳುವಂತೆ ಸ್ಥಳೀಯರಿಂದ ಒತ್ತಾಯ ಕೇಳಿ ಬಂದಿದೆ.  

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top