Electric shock- ಕರ್ತವ್ಯ ನಿರತ ಪವರ್ ಮ್ಯಾನ್ ವಿದ್ಯುತ್ ಶಾಕ್ ಗೆ ಬಲಿ

Electric shock- ಕರ್ತವ್ಯ ನಿರತ ಪವರ್ ಮ್ಯಾನ್ ವಿದ್ಯುತ್ ಶಾಕ್ ಗೆ ಬಲಿ

Kadaba Times News
0

 ಕಡಬ ಟೈಮ್ಸ್(KADABA TIMES): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಓಡಿನ್ಮಾಳ ಗ್ರಾಮದಲ್ಲಿ ಪವರ್ ಮ್ಯಾನ್ ಒಬ್ಬರು ಮೇ.30 ರಂದು  ವಿದ್ಯುತ್ ಶಾಕ್ ಗೆ ಬಲಿಯಾಗಿದ್ದಾರೆ.



ಓಡಿನ್ನಾಳ ಗ್ರಾಮದ ಕೆಂಜಿಲ ಮನೆ ನಿವಾಸಿ ಸುಕುಮಾರ್ ಜೈನ್ ಅವರ ಪುತ್ರ ಕುವೆಟ್ಟು ಗ್ರಾಮದ  ಸಹಾಯಕ ಪವರ್ ಮ್ಯಾನ್ ವಿಜೇಶ್ ಜೈನ್  ಮೃತರು.


ಓಡಿನ್ಮಾಳ ಗ್ರಾಮದ  ಕುಮ್ಮುಂಜ ಎಂಬಲ್ಲಿ ಎಚ್.ಟಿ  ಲೈನ್ ನಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾರೆ.


ಮೃತ ವಿಜೇಶ್ ಜೈನ್ ಅವರ ಮೃತದೇಹವನ್ನು  ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top