ನಿರ್ಮಲ ಮನಸ್ಸಿಗೆ ದೇವರು ಶೀಘ್ರ ಒಲಿಯುತ್ತಾನೆ- ಕಡಬದಲ್ಲಿ ಒಡಿಯೂರು ಶ್ರೀ ಆಶೀರ್ವಚನ

ನಿರ್ಮಲ ಮನಸ್ಸಿಗೆ ದೇವರು ಶೀಘ್ರ ಒಲಿಯುತ್ತಾನೆ- ಕಡಬದಲ್ಲಿ ಒಡಿಯೂರು ಶ್ರೀ ಆಶೀರ್ವಚನ

Kadaba Times News
0

ಕಲಿಯುದಲ್ಲಿ ಭಗವಂತನ ಅನುಸಂಧಾನಕ್ಕೆ ಭಜನೆಯು ಅತ್ಯಂತ ಸುಲಭದ ದಾರಿಯಾಗಿದೆ ಕೃತಯುಗದಲ್ಲಿ ಧ್ಯಾನದ್ವಾಪರ ಯುಗದಲ್ಲಿ ಅರ್ಚನೆತ್ರೇತಾಯುಗದಲ್ಲಿ ಯಜ್ಞ ಯಾಗಗಳು ಮಹತ್ವ ಪಡೆದಿದ್ದರೆ ಕಲಿಯುಗದಲ್ಲಿ ಭಜನೆಗೆ ಹೆಚ್ಚಿನ ಮಹತ್ವ ಸಿಕ್ಕಿದೆ -ಒಡಿಯೂರು ಶ್ರೀ

ಕಡಬ: ಭಜನೆಯಿಂದ ಭಾವಶುದ್ಧಿಯಾಗುತ್ತದೆ. ಆದುದರಿಂದ ಜೀವನದಲ್ಲಿ ಸಂಸ್ಕಾರ ಎನ್ನುವುದು ಅತ್ಯಂತ ಮಹತ್ವದ್ದು. ಸಂಸ್ಕಾರ ರಹಿತ ಶಿಕ್ಷಣ ಅಪೂರ್ಣ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ನುಡಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ 


ಕಡಬದ ಶ್ರೀ ದುಗಾಂಬಿಕಾ ಭಜನಾ ಮಂಡಳಿ ವತಿಯಿಂದ ಶ್ರೀ ದುಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಆಯೋಜಿಸಲಾಗಿದ್ದ 42ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಅಂಗವಾಗಿ ಏರ್ಪಡಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ  ಮಾತನಾಡಿದರು.


ನಾವು ನಿರ್ಮಲ ಮನಸ್ಸಿನಿಂದ ದೇವರನ್ನು ದ್ಯಾನಿಸಿದರೆ ನಮಗೆ ದೇವರ ಅನುಗ್ರಹದ ಜತೆಗೆ ಶಾಂತಿ ಮತ್ತು ಸಮಾಧಾನದಿಂದ ಬದುಕಬಹುದು. ನಿರ್ಮಲ ಮನಸ್ಸಿಗೆ ದೇವರು ಶೀಘ್ರ ಒಲಿಯುತ್ತಾನೆ.  ಕಲಿಯುದಲ್ಲಿ ಭಗವಂತನ ಅನುಸಂಧಾನಕ್ಕೆ ಭಜನೆಯು ಅತ್ಯಂತ ಸುಲಭದ ದಾರಿಯಾಗಿದೆ ಕೃತಯುಗದಲ್ಲಿ ಧ್ಯಾನ, ದ್ವಾಪರ ಯುಗದಲ್ಲಿ ಅರ್ಚನೆ, ತ್ರೇತಾಯುಗದಲ್ಲಿ ಯಜ್ಞ ಯಾಗಗಳು ಮಹತ್ವ ಪಡೆದಿದ್ದರೆ ಕಲಿಯುಗದಲ್ಲಿ ಭಜನೆಗೆ ಹೆಚ್ಚಿನ ಮಹತ್ವ ಸಿಕ್ಕಿದೆ ಎಂದರು.


ಧಾರ್ಮಿಕ ಉಪನ್ಯಾಸ ನೀಡಿದ ವಾಗ್ಮಿ ಬಾರ್ಕೂರಿನ ಎನ್.ಆರ್.ದಾಮೋದರ ಶರ್ಮ ಅವರು,. ನಮ್ಮ ಧರ್ಮ, ಸಂಸ್ಕೃತಿ, ಆಚಾರ ವಿಚಾರಗಳ ಕುರಿತು ಮಕ್ಕಳು ಹೆಮ್ಮೆ ಪಡುವ ರೀತಿಯಲ್ಲಿ ಅವರನ್ನು ಬೆಳೆಸಬೇಕು, ಧಾರ್ಮಿಕ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆ ತರುವ ಕೆಲಸ ಹಿರಿಯರಿಂದ ಆಗಬೇಕು ಎಂದರು.


ಶ್ರೀ ದುಗಾಂಬಿಕಾ ಅಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ  ಅಧ್ಯಕ್ಷತೆ ವಹಿಸಿದ್ದರು.ಬಲ್ಯ ಶ್ರೀ ಉಮಾ ಮಹೇಶ್ವರೀ ದೇವಸ್ಥಾನದ ಆಡಳಿತ ಸಮಿತಿಯ ಕೋಶಾಧಿಕಾರಿ ಸತೀಶ್ಚಂದ್ರ ಶೆಟ್ಟಿ ಬೀರುಕ್ಕು, ಕನ್ಯಾನದ ಬನಾರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ಅವರು ಅತಿಥಿಗಳಾಗಿ ಆಗಮಿಸಿದ್ದರು.  ಶ್ರೀ ದುಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕರ್ಕೇರ ಪೆಲತ್ತೋಡಿ ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top