ಕೊಯಿಲ ಗ್ರಾಮದ ಎರ್ಮಡ್ಕದಲ್ಲಿ ಸೇತುವೆಯ ತಡೆಗೊಡೆ ಕುಸಿತ:ಸುಳ್ಯ ಶಾಸಕಿ ಭೇಟಿ

ಕೊಯಿಲ ಗ್ರಾಮದ ಎರ್ಮಡ್ಕದಲ್ಲಿ ಸೇತುವೆಯ ತಡೆಗೊಡೆ ಕುಸಿತ:ಸುಳ್ಯ ಶಾಸಕಿ ಭೇಟಿ

Kadaba Times News
0

 ರಾಮಕುಂಜ:  ಮೇ.30 ರಂದು ಸುರಿದ ಧಾರಕಾರ ಮಳೆಗೆ  ಕೊಯಿಲ ಗ್ರಾಮದ ಎರ್ಮಡ್ಕ ಎಂಬಲ್ಲಿರುವ ಸೇತುವೆಯ  ತಡೆಗೊಡೆ ಕುಸಿದು ಬೃಹತ್ ತೋಡಿನ  ಪಕ್ಕದ ಮನೆ ಅಪಾಯಕಾರಿ ಸ್ಥಿತಿಯಲ್ಲಿರುವ ಪ್ರದೇಶಕ್ಕೆ ಮಂಗಳವಾರ    ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗಿರಥಿ ಮುರುಳ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 


ಇದೇ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಯಂಚಿನ ಮಣ್ಣು ಪಕ್ಕದ ತೋಡಿಗೆ ಕುಸಿದ ಸ್ಥಳ,ಎರ್ಮಡ್ಕ ಎಂಬಲ್ಲಿ ಧರೆ ಕುಸಿದ      ಪ್ರದೇಶಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು.


ಈಗಾಗಲೇ ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲ ವರ್ಗೀಸ್ ಅವರಿಗೆ ಸಾರ್ವಜನಿಕ ಪ್ರದೇಶದಲ್ಲಿ ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಲಾಗಿದೆ. ಈ ಪ್ರದೇಶಕ್ಕೂ ಆಯುಕ್ತರು ಭೇಟಿ ಪರಿಶೀಲನೆ ನಡೆಸಿದ  ವರದಿಯಾದರದಲ್ಲಿ ಸಂಬಂದಪಟ್ಟ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಸೂಕ್ತಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.   ಪಕ್ಷದ ಪ್ರಮುಖರು, ಸ್ಥಳೀಯರು ಸ್ಥಳದಲ್ಲಿದ್ದರು .   

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top