ಕಡಬ ಟೈಮ್ಸ್ (KADABA TIMES):ಸುಳ್ಯದ ದೊಡ್ಡತೋಟದಿಂದ ಮರ್ಕಂಜ ರಸ್ತೆಯ ನಳಿಯಾರು ಎಂಬಲ್ಲಿ ಜೀಪೊಂದು ನಿಯಂತ್ರಣ ತಪ್ಪಿ ತೋಡಿಗಿಳಿದಿದ್ದು ಚಾಲಕ ಅಪಾಯದಿಂದ ಪಾರಾದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಮರ್ಕಂಜದ ಕಟ್ಟಕ್ಕೋಡಿ ಗಣಪಯ್ಯ ಗೌಡ ಎಂಬವರು ಜೀಪು ಚಲಾಯಿಸುತ್ತಿದ್ದರು.
ದೊಡ್ಡತೋಟ- -ಮರ್ಕಂಜಕ್ಕೆ ರಸ್ತೆಯಲ್ಲಿ ಇಳಿಜಾರು ಮತ್ತು ತಿರುವು ಇದೆ. ಕೆಳಭಾಗದಲ್ಲಿ ತೋಡೊಂದು ಹರಿಯುತ್ತಿದ್ದು, ತಿರುವಿನಲ್ಲಿ ನಿಯಂತ್ರಣ ತಪ್ಪಿದ ಜೀಪು ನೇರವಾಗಿ ಸುಮಾರು 50 ಅಡಿ ಕೆಳಗೆ ಹರಿಯುವ ತೋಡಿಗೆ ಇಳಿದಿದೆ.
ಜೀಪಿನಲ್ಲಿ ಚಾಲಕ ಮಾತ್ರ ಇದ್ದು, ಅದೃಷ್ಟವಶಾತ್ ಪಾರಾಗಿದ್ದಾರೆ.


