ಕಡಬ ಟೈಮ್ಸ್ (KADABA TIMES):ದ.ಕ ಜಿಲ್ಲಾ ಪಂಚಾಯತ್ ವತಿಯಿಂದ ಗ್ರಾಮೀಣ ಪ್ರದೇಶದಲ್ಲಿ ದ್ರವ ತ್ಯಾಜ್ಯ ನಿರ್ವಹಣೆ ಪದ್ಧತಿಯನ್ನು ಅಳವಡಿಸಿಕೊಳ್ಳಲು ಉತ್ತೇಜಿಸುವ ಸಲುವಾಗಿ ಸ್ವಚ್ಛ ಗ್ರಾಮ ಸ್ವಚ್ಛ ಪರಿಸರ ಹೆಸರಿನಡಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಆಶ್ಲೇಷ್ ಕುಮಾರ್ ಕಾಣಿಯೂರು ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಜೂನ್ 6, 2020ರಂದು ನಡೆಸಿದ ಕಿರುಚಿತ್ರ ,ವಿಜ್ಞಾನ ಮಾದರಿ ,ಯಶೋಗಾಥೆ ಸ್ಪರ್ಧೆಯಲ್ಲಿ ಪುತ್ತೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಐಟಿ ಉಪನ್ಯಾಸಕ ಆಶ್ಲೇಷ್ ಕುಮಾರ್ ಕಾಣಿಯೂರು ಭಾಗವಹಿಸಿದ್ದರು.
10 ಸಾವಿರ ನಗದು, ಪ್ರಶಸ್ತಿ ಪುರಸ್ಕಾರ ವನ್ನು ಇತ್ತೀಚಿಗೆ ಸಂಸದ ನಳಿನ್ ಕುಮಾರ್ ಕಟೀಲ್ ರವರು ನೀಡಿ ಗೌರವಿಸಿದರು. ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ,ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಡಾ ರಾಜೇಂದ್ರ.ಕೆ.ವಿ ಉಪಸ್ಥಿತರಿದ್ದರು. ಇವರು ಬೆಳಂದೂರು ಗ್ರಾಮದ ಮಿಪಾಲು ನಾರಾಯಣ ಗೌಡ ಮತ್ತು ಜಾನಕಿ ದಂಪತಿಗಳ ಪುತ್ರ.


