ಕಡಬ ಟೈಮ್ಸ್ (KADABA TIMES):ವಾಹನ ಚಾಲನಾ ನಿಯಮ ಉಲ್ಲಂಘನೆಗೆ ಸಂಬಂಧಿಸಿ ದಂಡ ವಿಧಿಸುತ್ತಿರುವ ಕಡಬ ಪೊಲೀಸರು ಮಾಸ್ಕ್ ಧರಿಸದವರಿಗೂ ದಂಡ ವಿಧಿಸುವ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ದಂಡ ವಿಧಿಸುವ ಪ್ರಕ್ರಿಯೆಗೆ ಮುಂದಾಗಿದ್ದಾರೆ.
ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂದಿಸಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿಲಾಗುತ್ತಿದೆ.ಕಡಬ ಠಾಣಾ ಎಸ್.ಐ ರುಕ್ಮ ನಾಯ್ಕ್ ಅವರು ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರಿದ್ದರೆ ಅವರಿಗೆ ಅಂತರ ಕಾಯ್ದುಕೊಳ್ಳುವ ಜಾಗೃತಿಯ ಜೊತೆಗೆ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಕಾರ್ಯ ನಡೆಸುತ್ತಿದ್ದಾರೆ.
ಕೆಲವು ಸಾರ್ವಜನಿಕರಿಗೆ ಮಾಸ್ಕ್ ನ ಅಗತ್ಯ ಹಾಗೂ ದಂಡದ ಅರಿವಿನಿಂದಾಗಿ ಮಾಸ್ಕ್ ಅಳವಡಿಕೆಯ ನಿಜವಾದ ಮಹತ್ವ ತಿಳಿದಂತಾಗಿದೆ. ಠಾಣಾ ಸರಹದ್ದಿನಲ್ಲಿ ಮಾಸ್ಕ್ ಹಾಕದವರ ಮೇಲೆ ಖಾಕಿ ಪಡೆ ಹದ್ದಿನ ಕಣ್ಣಿಟ್ಟಿದೆ.


