ಕಡಬ ಟೈಮ್ಸ್ (KADABA TIMES):ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಸಾಮಾಜಿಕ ಮತ್ತು ಧಾರ್ಮಿಕ ವಾಗಿ ಸಕ್ರಿಯವಾಗಿ ತೊಡಕಿಕೊಂಡಿರುವ ಶಾಸ್ತಾರ ಫ್ರೆಂಡ್ಸ್ ಕುತ್ರಾಡಿ-ಹಾರ್ಪಳ ಸಂಘಟನೆ ನಾಲ್ಕನೇ ವರ್ಷಕ್ಕೆ ಹೆಜ್ಜೆ ಹಿಡುತ್ತಿದೆ. ಈ ಹಿನ್ನೆಲೆಯಲ್ಲಿ ಪುರಂದರ ಗೌಡ ಪಟ್ಟೆಮಜಲು ಇವರ ಅಧ್ಯಕ್ಷತೆಯಲ್ಲಿ ಇದರ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಪದಗ್ರಹಣ ಮತ್ತು ಅಧಿಕಾರ ಹಸ್ತಾಂತರ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಅತಿಥಿಗಳಾಗಿ ನೆಲ್ಯಾಡಿ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಪ್ರಹ್ಲಾದ್ ಶೆಟ್ಟಿ ನೆಲ್ಯಾಡಿ , ಶ್ರೀ ಶಾಸ್ತಾರೇಶ್ವರ ದೇವಾಸ್ಥಾನ ಕುತ್ರಾಡಿ-ಹಾರ್ಪಳ ಇದರ ಅಧ್ಯಕ್ಷ ಸುಂದರ ಗೌಡ ಅತ್ರಿಜಾಲು ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ತಾಲೂಕು ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಳ, ಶ್ರೀ ವಿಷ್ಣುಮೂರ್ತಿ ದೇವಾಸ್ಥಾನ ಪಡುಬೆಟ್ಟು ಇದರ ಸಂಚಾಲಕ ಸತೀಶ್ ಕೆ.ಯಸ್ .ದುರ್ಗಾಶ್ರೀ , ಶ್ರೀ ರಾಜನ್ ದೈವ ಟ್ರಸ್ಟ್ ದೈವಗಿರಿ-ಬೊನ್ಯಸಾಗು ಇದರ ಅಧ್ಯಕ್ಷ ಸತೀಶ್ಚಂದ್ರ ಗೌಡ ಅತ್ರಿಜಾಲು ಪಾಲ್ಗೊಂಡು ಸಂಘಟನೆಯ ಕಾರ್ಯವೈಖರಿಗಳ ಮತ್ತು ಸಾಧನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಶುಭಹಾರೈಸಿದರು.
ಶಾಸ್ತಾರ ಫ್ರೆಂಡ್ಸ್ ನ ನೂತನ ಅಧ್ಯಕ್ಷರಾಗಿ ಕುಶಾಲಪ್ಪ ಗೌಡ ಮರ್ವೋಡಿ ,ಉಪಾಧ್ಯಕ್ಷ ರಾಗಿ ಶ್ರೀನಿವಾಸ ಗಡಿಕಲ್ಲು ,ಕಾರ್ಯದರ್ಶಿ ಯಾಗಿ ದೀಪಕ್ ಬಿ ,ಕ್ರೀಡಾಕಾರ್ಯದರ್ಶಿ ಯಾಗಿ ಜಯಂತ್ ಗಡಿಕಲ್ಲು,ಗೌರವಾಧ್ಯಕ್ಷರಾಗಿ ಧನಂಜಯ ಗೌಡ ರವರು ಆಯ್ಕೆ ಯಾದರು. ದೀಪಕ್ ಬಿ ಮತ್ತು ಪ್ರಕಾಶ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಸುರೇಶ್ ಪಡಿಪಂಡ ಪ್ರಾಸ್ತಾವಿಕ ಸೋಮಶೇಖರ್ ,ಮಹೇಶ್ ನಾಯ್ಕ್ ಸಹಕರಿಸಿದರು.


