ಕಡಬ ಟೈಮ್ಸ್, ಪುತ್ತೂರು: ಮಹಿಳೆಯೊಬ್ಬರಿಗೆಗ ಮಾನಸಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಕಡಬ ತಾಲೂಕು ಕಾಣಿಯೂರು ಮೂಲದ ಪತ್ರಕರ್ತನ ವಿರುದ್ದ ಕಾರ್ಕಳ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳದಲ್ಲಿ ನ್ಯೂಸ್ ವೆಬ್ ಸೈಟ್ ಮನ್ನಡೆಸುತ್ತಿರುವ ಪ್ರಸ್ತುತ ಕಾರ್ಕಳದಲ್ಲಿ ವಾಸವಿರುವ ರಾಮಚಂದ್ರ ಇವರ ವಿರುದ್ದ ದೂರು ದಾಖಲಾಗಿರುವುದಾಗಿದೆ.
ಕಾರ್ಕಳದ ಮಹಿಳೆ ನೀಡಿರುವ ದೂರಿನಲ್ಲಿ ತನ್ನ ಪತಿ ಹಾಗೂ ಅತ್ತೆ ಮಾವನಿಗೆ ಕರೆ ಮಾಡಿ ನನ್ನ ವಿರುದ್ಧ ಇಲ್ಲಸಲ್ಲದ ವಿಚಾರಗಳನ್ನು ಹೇಳಿ ನಮ್ಮ ಸಂಸಾರದ ಮಾನಸಿಕ ನೆಮ್ಮದಿಯನ್ನು ಕೆಡಿಸಲು ಯತ್ನಿಸುತ್ತಿದ್ದಾರೆ. ಪತಿ ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾಗ ಅವರ ಮೊಬೈಲ್ ಗೆ ಕರೆ ಮಾಡಿ ದೂರಿದ್ದಾರೆ. ಪತಿ ಮುನ್ನಡೆಸುತ್ತಿರುವ ಅಂಗಡಿಯ ವಿರುದ್ದ ಸುಳ್ಳು ವರದಿ ಬಿತ್ತರಿಸಿ ಅಂಗಡಿ ಲೈಸೆನ್ಸ್ ರದ್ದು ಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ದೂರು ಸ್ವೀಕರಿರುವ ಕಾರ್ಕಳ ಠಾಣಾ ಪೊಲೀಸರು ಪತ್ರಕರ್ತನನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.


