ಸುಳ್ಯದ ಹಾಸ್ಟೇಲ್ ನಲ್ಲಿ ಅಮಾನವೀಯ ಘಟನೆ: ಬಾಲಕನ ಜನನಾಂಗ ಹಿಡಿದೆಳೆದ ಸಹಪಾಠಿಗಳು: ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ

ಸುಳ್ಯದ ಹಾಸ್ಟೇಲ್ ನಲ್ಲಿ ಅಮಾನವೀಯ ಘಟನೆ: ಬಾಲಕನ ಜನನಾಂಗ ಹಿಡಿದೆಳೆದ ಸಹಪಾಠಿಗಳು: ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ

Kadaba Times News
0

 ಸುಳ್ಯ: ಹಾಸ್ಟೆಲ್ ನಲ್ಲಿ ಉಳಿದು ಶಾಲೆಗೆ ಹೋಗುತ್ತಿದ್ದ ಬಾಲಕನೋರ್ವನ  ಜನನಾಂಗವನ್ನು ಸಹಪಾಠಿ ವಿದ್ಯಾರ್ಥಿಗಳು ಹಿಡಿದೆಳೆದ ಕಾರಣ ಏಟಾಗಿ ಊದಿಕೊಂಡಿದ್ದು ಬಾತುಕೊಂಡಿದ್ದು, ಬಾಲಕ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಸುಳ್ಯದ ಸಂಪಾಜೆಯಿಂದ ವರದಿಯಾಗಿದೆ.


ಸಂಪಾಜೆಯ ಆಲಡ್ಕ ನಿವಾಸಿಯಾಗಿರುವ 12 ವರ್ಷ ವಯಸ್ಸಿನ ಬಾಲಕ ಸಂಪಾಜೆಯ ಹಾಸ್ಟೆಲ್ ನಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದಸೆ.14ರಂದು ರಾತ್ರಿ ಹಾಸ್ಟೆಲ್ ನಲ್ಲಿ ಇಬ್ಬರು ಸಹಪಾಠಿ ವಿದ್ಯಾರ್ಥಿಗಳು ಬಾಲಕನ ಗುಪ್ತಾಂಗ ಹಿಡಿದೆಳೆದಿದ್ದರು. ಬಳಿಕ ಮೂತ್ರ ವಿಸರ್ಜನೆ ಮಾಡುವ ವೇಳೆ ನೋವಾಗುತ್ತಿದ್ದ ಮನೆಗೆ ಬಂದಿದ್ದನೆನ್ನಲಾಗಿದೆ.



ಮೊದಲು ಯಾರೊಡನೆಯೂ ಈ ವಿಚಾರ ಹಂಚಿಕೊಂಡಿರಲಿಲ್ಲ,ತೀವ್ರ ನೋವಿನ ಕಾರಣ ಮನೆಗೆ ತೆರಳಿದ್ದು ಈ ವೇಳೆ ಮನೆಯವರ ಗಮನಕ್ಕೆ ಬಂದಿದೆ.ಮನೆಯವರು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದರೆಂದೂ, ಅಲ್ಲಿನ ವೈದ್ಯರ  ಸಲಹೆಯ ಮೇರೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತೆಂದೂ ತಿಳಿದುಬಂದಿದೆ


ಅಲ್ಲಿ ಚಿಕಿತ್ಸೆ ನೀಡಿ ಶುಕ್ರವಾರ   ಬಾಲಕನಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈಗ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ. ಸಂಪಾಜೆ ಪೋಲೀಸ್ ಹೊರಠಾಣೆಯಲ್ಲಿ ಪ್ರಕರಣ ದಾಖಲಾಗಿ, ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯಲಿದೆ.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top