ಬೆಳ್ಳಂಬೆಳಗ್ಗೆ ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ 1 ಮೀಟರ್ ದೂರದಲ್ಲಿದ ಚರಂಡಿಗೆ ಉರುಳಿದ ಆಮ್ನಿ ಕಾರು

ಬೆಳ್ಳಂಬೆಳಗ್ಗೆ ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ 1 ಮೀಟರ್ ದೂರದಲ್ಲಿದ ಚರಂಡಿಗೆ ಉರುಳಿದ ಆಮ್ನಿ ಕಾರು

Kadaba Times News
0

 ಕಡಬ ಟೈಮ್ಸ್, ಪುತ್ತೂರು: ಚಾಲಕನ ನಿಯಂತ್ರಣ ಕಳಕೊಂಡ ಆಮ್ನಿ ವಾಹನ ರಸ್ತೆಯಿಂದ ತುಸು ದೂರದಲ್ಲಿದ ಚರಂಡಿಗೆ ಉರುಳಿ ಬಿದ್ದ ಘಟನೆ ಪುತ್ತೂರು ಸಮೀಪದ  ತಿಂಗಳಾಡಿ ಬಡಕೋಡಿ ರಸ್ತೆಯ ನೆಕ್ಕಿಲು ಎಂಬಲ್ಲಿ ಇಂದು (ಸೆ 19) ಬೆಳಿಗ್ಗೆ ನಡೆದಿದೆ.


ಆಮ್ನಿಯಲ್ಲಿ ಚಾಲಕ ಮಾತ್ರವಿದ್ದು ಯಾವುದೇ ಅಪಾಯಗಳಿಲ್ಲದೇ ಪಾರಾಗಿದ್ದಾರೆ. ಆಮ್ನಿಯು ತಿಂಗಳಾಡಿಯಿಂದ ರೆಂಜಲಾಡಿಗೆ ತೆರಳುತ್ತಿತ್ತು.


ಅಪಘಾತವು ಬೆಳಗಿನ ಜಾವ 7.30 ಸುಮಾರಿಗೆ ನಡೆದಿದೆ. ರೆಂಜಲಾಡಿ ನಿವಾಸಿ ರಫೀಕ್ ಎಂಬವರು ಅಪಘಾತಕ್ಕಿಡಾದ ವಾಹನ ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.



ನಿದ್ದೆ ಮಂಪರು ಆವರಿಸಿದ್ದರಿಂದ ವಾಹನ ಹತೋಟಿ ಕಳೆದುಕೊಂಡು ರಸ್ತೆಯಿಂದ 1 ಮೀಟರ್ ದೂರದಲ್ಲಿದ  ಚರಂಡಿಗೆ ಉರುಳಿದೆ. ವಾಹನ ಉರುಳಿಬಿದ್ದ ಸಮೀಪದಲ್ಲೆ ವಿದ್ಯುತ್ ಕಂಬವಿತ್ತು, ಅದಕ್ಕೆ ಢಿಕ್ಕಿ  ಹೊಡೆಯುತ್ತಿದ್ದರೇ ಭಾರಿ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.

ಸ್ಥ

ಳೀಯರ ನೆರವಿನಿಂದ ಕ್ರೇನ್ ಸಹಾಯದಿಂದ ಆಮ್ನಿಯನ್ನು ಮೇಲಕ್ಕೆತ್ತಲಾಯಿತು. ವಾಹನ ಸಂಪೂರ್ಣ ಜಖಂಗೊಂಡಿದೆ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top