ಕಡಬದಲ್ಲಿ ಅದ್ದೂರಿ ಶೋಭಾಯಾತ್ರೆಯೊಂದಿಗೆ ಸಾರ್ವಜನಿಕ ಗಣೇಶೋತ್ಸವ ಸಂಪನ್ನ

ಕಡಬದಲ್ಲಿ ಅದ್ದೂರಿ ಶೋಭಾಯಾತ್ರೆಯೊಂದಿಗೆ ಸಾರ್ವಜನಿಕ ಗಣೇಶೋತ್ಸವ ಸಂಪನ್ನ

Kadaba Times News
0

ಕಡಬದ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜನೆಗೊಂಡ ಗಣೇಶೋತ್ಸವವು ಮೂರು ದಿನಗಳ ಕಾಲ ನಡೆದ ವೈದಿಕ ಕಾರ್ಯಗಳ ಬಳಿಕ ಇಂದು(ಸೋಮವಾರ)  ಅದ್ದೂರಿ ಶೋಭಾಯಾತ್ರೆ ನಡೆಯಿತು.



ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಾಲಯದ ವಠಾರದಿಂದ ಹೊರಟ ಭವ್ಯ ಮೆರವಣಿಗೆ ಕಳಾರ, ಹೊಸಮಠದಿಂದ ಸಾಗಿ ಹೊಸಮಠದ ಗುಂಡ್ಯ ಹೊಳೆಯಲ್ಲಿ ವಿಸರ್ಜನೆಯಾಯಿತು.

ರಸ್ತೆಯುದ್ದಕ್ಕೂ ತಳಿರು ತೋರಣ,ಕೇಸರಿ ಬಾವುಟಗಳಿಂದ ಸಿಂಗಾರ, ಕಟ್ಟೆಪೂಜೆಗಳಿದ್ದು ,ಚೆಂಡೆ ಸಹಿತ ಮೆರವಣಿಗೆಗೆ ಕುಣಿತ ಭಜನಾ ತಂಡ ಮೆರುಗು ನೀಡಿತು.  

ಮೆರವಣಿಗೆಯಲ್ಲಿ ಹಿಂದೂಪರ ಸಂಘಟನೆಗಳ ಯುವಕರು ಮಳೆಯ ನಡುವೆಯೂ   ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಸಂಭ್ರಮಿಸಿ ಇನ್ನಷ್ಟು ಮೆರುಗುಗೊಳಿಸಿದರು.  ವಿವಿಧ ಊರಿನ ಜನರು ಪಾಲ್ಗೊಂಡಿದ್ದರು. ಅಲ್ಲಲ್ಲಿ ಪಂಚ ಕಜ್ಜಾಯ ಮತ್ತು ಪಾನೀಯ ವ್ಯವಸ್ಥೆ ಮಾಡಲಾಗಿತ್ತು. 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top