ಸುಬ್ರಹ್ಮಣ್ಯ ಸಮೀಪದ ತೋಡಿನಲ್ಲಿ ಭಾರೀ ಪ್ರಮಾಣ ನೀರು:ಹೆದ್ದಾರಿಗೆ ನುಗ್ಗಿ ಸೇತುವೆ ಮುಳುಗಡೆ

ಸುಬ್ರಹ್ಮಣ್ಯ ಸಮೀಪದ ತೋಡಿನಲ್ಲಿ ಭಾರೀ ಪ್ರಮಾಣ ನೀರು:ಹೆದ್ದಾರಿಗೆ ನುಗ್ಗಿ ಸೇತುವೆ ಮುಳುಗಡೆ

Kadaba Times News
0

 ಸುಬ್ರಹ್ಮಣ್ಯ: ಘಟ್ಟ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ರವಿವಾರ ಸುಬ್ರಹ್ಮಣ್ಯ ಸಮೀಪದ ತೋಡಿನಲ್ಲಿ ಭಾರೀ ಪ್ರಮಾಣದ ನೀರು ಹರಿದು ಹೆದ್ದಾರಿಗೆ ನುಗ್ಗಿದ್ದು, ಸೇತುವೆ ಮುಳುಗಡೆಗೊಂಡಿದೆ.


ಕೈಕಂಬ ಬಳಿಯ  ಚೇರು ಎಂಬಲ್ಲಿ ಹೆದ್ದಾರಿಗೆ ನುಗ್ಗಿದ ನದಿ ನೀರು

ಸುಬ್ರಹ್ಮಣ್ಯ ಸಮೀಪದ ಕೈಕಂಬದ ಹೊಳೆಯಲ್ಲಿ ಹರಿದ ನೀರು ಸುಬ್ರಹ್ಮಣ್ಯ – ಧರ್ಮಸ್ಥಳ ಹೆದ್ದಾರಿಯ ಚೇರು ಎಂಬಲ್ಲಿ ಹೆದ್ದಾರಿಗೆ ನುಗ್ಗಿ ಸಂಚಾರಕ್ಕೆ ತೊಡಕುಂಟಾಗಿದೆ.




ಕಡಬ – ಸುಬ್ರಹ್ಮಣ್ಯ ಹೆದ್ದಾರಿಯ ಕೈಕಂಬ ಸೇತುವೆಯೂ ಸ್ವಲ್ಪ ಹೊತ್ತು ಮುಳುಗಡೆಗೊಂಡ ಪರಿಣಾಮ ಕೆಲವು ತಾಸು ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಸುಳ್ಯ ಭಾಗದಲ್ಲೂ ಶನಿವಾರ, ರವಿವಾರ ಸಾಧಾರಣ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.


ಸುಬ್ರಹ್ಮಣ್ಯ ಸಮೀಪದ  ಕೊಲ್ಲಮೊಗ್ರು- ಕಲ್ಮಕಾರು ಸಂಪರ್ಕ ರಸ್ತೆಯ ಗಡಿಕಲ್ಲಿನಲ್ಲಿ ರಸ್ತೆ ಬದಿಯ ತೋಡಿನ ಭಾಗದಲ್ಲಿ ಮಣ್ಣು ಕುಸಿದಿರುವ ಕಾರಣ ಘನ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.  


ಘನ ವಾಹನ ಸಂಚಾರ ನಿರ್ಬಂಧಿಸಿದ ಕಾರಣ ಕಲ್ಮಕಾರು ಭಾಗಕ್ಕೆ ಕೆಎಸ್ಆರ್ಟಿಸಿ ಬಸ್ ಸಂಚರಿಸಲಾಗದೆ ಆ ಭಾಗದ ಜನರಿಗೆ ತೀವ್ರ ಸಮಸ್ಯೆ ಉಂಟಾಗಿದೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top