ಕಡಬ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿನೆ

ಕಡಬ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿನೆ

Kadaba Times News
0

ಕಡಬ: ದ.ಕ ಜಿಲ್ಲಾ ಪರಿಷತ್ ಕಡಬ ತಾಲೂಕು ಘಟಕದ ವತಿಯಿಂದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನವು  ನ.30ರಂದು ಕುಂತೂರು ಪದವು ಸ್ಟೆಂಟ್ ಜಾರ್ಜ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಆವರಣದಲ್ಲಿ  ಆರಂಭಗೊಂಡಿದೆ.

ಡಾ|ಶಿವರಾಮ ಕಾರಂತ ಸಭಾಂಗಣದಲ್ಲಿ ವಂ|ಎ ಜೇಕಬ್ ವೇದಿಕೆಯಲ್ಲಿ  ಸಮ್ಮೇಳನದ ಸರ್ವಾಧ್ಯಕ್ಷರಾದ  ಸಾಮಾಜಿಕ ಮುಂದಾಳು, ಬರಹಗಾರ ಎನ್. ಕರುಣಾಕರ ಗೋಗಟೆ ಅವರ ಮುಂದಾಳತ್ವದಲ್ಲಿ ಚಾಲನೆ ನೀಡಲಾಯಿತು.


ಬೆಳಗ್ಗೆ ಪದವು ಸೈಂಟ್ ಜಾರ್ಜ್ ಆರ್ಥೋಡೆಕ್ಸ್ ಚರ್ಚ್ ಬಳಿಯಿಂದ  ಕನ್ನಡ ಭುವನೇಶ್ವರಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪೆರಾಬೆ ಗ್ರಾಪಂ ಸದಸ್ಯ ಪಿ.ಜಿ.ರಾಜು ಉದ್ಘಾಟಿಸಿದರು. ಜಿ.ಪಂ. ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಪುಷ್ಪಾರ್ಚನೆ, ಪೆರಾಬೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ರಾಷ್ಟ್ರಧ್ವಜಾರೋಹಣ, ಕಸಾಪ ದ.ಕ.ಜಿಲ್ಲಾಧ್ಯಕ್ಷ ಡಾ|ಎಂ.ಪಿ.ಶೀನಾಥ್ ಅವರು ಪರಿಷತ್ ಧ್ವಜಾರೋಹಣ ಹಾಗೂ ಕಸಾಪ ಕಡಬ ತಾಲೂಕು ಅಧ್ಯಕ್ಷ ಕೆ.ಸೇಸಪ್ಪ ರೈ ನಾಡ ಧ್ವಜಾರೋಹಣ ನೆರವೇರಿಸಿದರು.

ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ|ವಸಂತ್ ಕುಮಾರ್ ಪೆರ್ಲ ಅವರು ಉದ್ಘಾಟಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top