ನೆಲ್ಯಾಡಿಯಲ್ಲಿ ಮಲೆಯಾಳಿ ಭಾಷೆಯಲ್ಲಿ ಬೈದು ಕಬ್ಬಿಣದ ರಾಡ್‌ನಿಂದ ಹಲ್ಲೆ ಆರೋಪ:ವ್ಯಕ್ತಿಯ ವಿರುದ್ದ FIR ದಾಖಲು

ನೆಲ್ಯಾಡಿಯಲ್ಲಿ ಮಲೆಯಾಳಿ ಭಾಷೆಯಲ್ಲಿ ಬೈದು ಕಬ್ಬಿಣದ ರಾಡ್‌ನಿಂದ ಹಲ್ಲೆ ಆರೋಪ:ವ್ಯಕ್ತಿಯ ವಿರುದ್ದ FIR ದಾಖಲು

Kadaba Times News
0

 


ಕಡಬ ಟೈಮ್ಸ್ ,ನೆಲ್ಯಾಡಿ: ಪರಿಚಯದ ವ್ಯಕ್ತಿಯೊಬ್ಬರು  ಮಲೆಯಾಳಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿರುವುದಾಗಿ ಕೊಣಾಲಿನ ನಿವಾಸಿಯೊಬ್ಬರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

 

ರೆಜಿಮೋನ್ ಜೋಸೆಫ್ ಎಂಬವರು  ನೆಲ್ಯಾಡಿ ಪೇಟೆಯಲ್ಲಿ ಗೂಡಂಗಡಿ ಹೊಂದಿದ್ದು .5ರಂದು ರಾತ್ರಿ ಅಂಗಡಿಗೆ ಬಾಗಿಲು ಹಾಕಿ ರುಕ್ಮಯ ಎಂಬವರ ಜೊತೆಯಲ್ಲಿ ಮತ್ತಾಯಿ ಎಂಬವರ ಮನೆಗೆ ಹೋಗಿ ಅಲ್ಲಿ ಮಾತನಾಡಿಕೊಂಡು ತಡರಾತ್ರಿ ಅಲ್ಲಿಂದ ಹೊರಟು ಕೊಣಾಲು ಮನೆ ಕಡೆಗೆ ಹೋಗುತ್ತಿದ್ದರು.


ಈ ವೇಳೆ  ನೆಲ್ಯಾಡಿ ಪೇಟೆಗೆ ತಲುಪಿದಾಗ ಪರಿಚಯದ ಜೋಲಿ ತೋಮಸ್ ಎಂಬಾತ ಮಲಯಾಳಂ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿದ್ದ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದು, ಹಲ್ಲೆಯಿಂದ ಗಾಯವಾಗಿರುವುದಾಗಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.


ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ .ಕ್ರ 118/2024 ಕಲಂ: 352,351(2),118(1) BNS-2023 ಯಂತೆ ಪ್ರಕರಣ ದಾಖಲಾಗಿದೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top