ನಾಳೆ(ನ.28ರಂದು) ಸರಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

ನಾಳೆ(ನ.28ರಂದು) ಸರಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

Kadaba Times News
0



ಕಡಬ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು  .28ರಂದು (ಗುರುವಾರ) ಮುಂಜಾನೆ 9:30ರಿಂದ ಕಾಲೇಜು ಆವರಣದಲ್ಲಿ ನಡೆಯಲಿದೆ.


ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ  ಕೃಷ್ಣಶೆಟ್ಟಿ ಕಡಬ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು  ಉದ್ಯಮಿ  ಕೇಶವ ಅಮೈ ಉದ್ಘಾಟಿಸಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಯುವ ಜನ ಒಕ್ಕೂಟದ . ನಿರ್ದೇಶಕಸ್ ರಾಕೇಶ್ ರೈ ಕೆಡೆಂಜಿ,  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಡಬ ಇದರ ಯೋಜನಾಧಿಕಾರಿ  ಮೇದಪ್ಪ ಗೌಡ ಎನ್, ಸರಕಾರಿ ಪ್ರೌಢ ಶಾಲೆಯ ಉಪಪ್ರಾಂಶುಪಾಲೆ  ಡಾ. ವೇದಾವತಿ,ಗ್ರಾ.ಪಂ ಮಾಜಿ ಅಧ್ಯಕ್ಷ  ಅಶ್ರಪ್ ಶೇಡಿಗುಂಡಿ ಭಾಗವಹಿಸಲಿದ್ದಾರೆ. ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಉಂಡಿಲ ಗೌರವ ಉಪಸ್ಥಿತಿ  ಇರಲಿದ್ದಾರೆ.


ಅಪರಾಹ್ನ ಗಂಟೆ 1:30 ರಿಂದ 4:30 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ವಾಸುದೇವ ಗೌಡ ಮತ್ತು ಕಾಲೇಜು ವಿದ್ಯಾರ್ಥಿ ನಾಯಕ ಕಾರ್ತೀಕ್ ಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top