ಕಡಬ: ವೈನ್ ಶಾಪ್ ಬಳಿ ಇರುವ ಹೋಟೆಲ್ ಗೆ ಪೊಲೀಸರಿಂದ ದಾಳಿ

ಕಡಬ: ವೈನ್ ಶಾಪ್ ಬಳಿ ಇರುವ ಹೋಟೆಲ್ ಗೆ ಪೊಲೀಸರಿಂದ ದಾಳಿ

Kadaba Times News
0


ಕಡಬ: ಇಲ್ಲಿನ ಸಂತೆ ಕಟ್ಟೆ ಬಳಿಯ ವೈನ್ಸ್ ಶಾಪ್ ಗೆ ತಾಗಿಕೊಂಡಿರುವ ಹೋಟೆಲ್ ಗೆ ಪೊಲೀಸರು ದಿಡೀರ್ ದಾಳಿ ಮಾಡಿದ ಘಟನೆ ನ.23 ರಾತ್ರಿ ನಡೆದಿದೆ.


ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದ ಆರೋಪದ ದೂರಿನ ಮೇರೆಗೆ ಹೋಟೆಲ್ ಗೆ ದಾಳಿ‌ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.


ಸುರೇಶ್ ಎಂಬವರಿಗೆ ಸೇರಿದ ಹೋಟೆಲನ್ನು ಕೆಲ ಹೊತ್ತು ಶಟರ್ ಎಳೆದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪಕ್ಕದ ವೈನ್ ಶಾಪ್ ನಿಂದ  ಮದ್ಯ ಖರೀದಿಸಿ ಹೋಟೆಲ್ ನಲ್ಲಿ ಸಾರ್ವಜನಿಕವಾಗಿ ಕುಡಿಯುತ್ತಿದ್ದರು ಎಂದು ತಿಳಿದು ಬಂದಿದೆ.


ಪೊಲೀಸರ ದಿಡೀರ್ ದಾಳಿಯಿಂದ ಗ್ರಾಹಕರು ಕೆಲ ಹೊತ್ತು ಗೊಂದಲಕ್ಕೆ ಒಳಗಾಗಿದ್ದರು. ಕಡಬ ಎಸ್.ಐ ಅಭಿನಂದನ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಪೊಲೀಸರು ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿರುವುದಾಗಿ ತಿಳಿದು ಬಂದಿದೆ.ಹೋಟೆಲ್ ಮಾಲಕನಿಗೆ ಈ ಹಿಂದೆಯೂ ಪೊಲೀಸರು ಎಚ್ವರಿಕೆ ನೀಡಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top