ಸಾಂತಾಕ್ಲಾಸ್ ಬರುವ ಹಿನ್ನೆಲೆ ವಿದ್ಯುತ್ ಅಲಂಕಾರ ಮಾಡುತ್ತಿದ್ದ ವೇಳೆ ದುರ್ಘಟನೆ: ವಿದ್ಯುತ್ ಶಾಕ್ ಗೆ ಶಾಲಾ ಬಾಲಕ ಬಲಿ

ಸಾಂತಾಕ್ಲಾಸ್ ಬರುವ ಹಿನ್ನೆಲೆ ವಿದ್ಯುತ್ ಅಲಂಕಾರ ಮಾಡುತ್ತಿದ್ದ ವೇಳೆ ದುರ್ಘಟನೆ: ವಿದ್ಯುತ್ ಶಾಕ್ ಗೆ ಶಾಲಾ ಬಾಲಕ ಬಲಿ

Kadaba Times News
0


ಕಡಬ ಟೈಮ್, ಬೆಳ್ತಂಗಡಿ:  ಶಾಲಾ ವಿದ್ಯಾರ್ಥಿ, ಬಾಲಕ ವಿದ್ಯುತ್ ಶಾಕ್ ನಿಂದ ಮೃತಪಟ್ಟ ಘಟನೆ ಡಿ.19 ಗುರುವಾರ ನಡೆದಿದೆ.


ಪೆರೋಡಿತ್ತಾಯನ ಕಟ್ಟೆ ಶಾಲೆ ಬಳಿಯ ನಿವಾಸಿ ಬೆಳ್ತಂಗಡಿ ಖಾಸಗಿ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿ ದಿ.ಸ್ಟ್ಯಾನ್ಲಿ ಡಿಸೋಜ ಅವರ ಪುತ್ರ ಸ್ಟೀಫನ್ (14) ಮೃತಪಟ್ಟರು.


ಸ್ಟೀಫನ್ ಮನೆಗೆ ಕ್ರಿಸ್ಮಸ್ ಅಂಗವಾಗಿ ಸಂಜೆ ಸಾಂತಾಕ್ಲಾಸ್ ಬರುವ ಹಿನ್ನೆಲೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟರು.


ಕಳೆದ ಕೆಲ ವರ್ಷಗಳ ಹಿಂದೆ ಹೆತ್ತವರನ್ನು ಕಳೆದುಕೊಂಡಿದ್ದ ಅವರು ಅಜ್ಜಿ ಹಾಗೂ ಮಾವನ ಆಶ್ರಯದಲ್ಲಿದ್ದರು. ಘಟನೆ ನಡೆದ ಸಮಯ ಮನೆಯಲ್ಲಿ ಅಜ್ಜಿ ಮಾತ್ರ ಇದ್ದರು ಎಂದು ತಿಳಿದುಬಂದಿದೆ

ಬಳಿಕ ಬಂದ ಮಾವ ವಿದ್ಯುತ್ ಸಂಪರ್ಕವನ್ನು ತಪ್ಪಿಸಿ ಬಾಲಕನ ರಕ್ಷಣೆಗೆ ಮುಂದಾದ ಕಾರಣ ಅವರು ಅಪಾಯದಿಂದ ಪಾರಾಗಿದ್ದಾರೆ.ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top