ಕಡಬ :ಓವರ್ ಟೇಕ್ ಭರದಲ್ಲಿ ದ್ವಿಚಕ್ರ ವಾಹನದ ಹಿಂಬಂದಿಗೆ ಗುದ್ದಿದ ಕಾರು: ಸವಾರ ಮಂಗಳೂರು ಆಸ್ಪತ್ರೆಗೆ ದಾಖಲು

ಕಡಬ :ಓವರ್ ಟೇಕ್ ಭರದಲ್ಲಿ ದ್ವಿಚಕ್ರ ವಾಹನದ ಹಿಂಬಂದಿಗೆ ಗುದ್ದಿದ ಕಾರು: ಸವಾರ ಮಂಗಳೂರು ಆಸ್ಪತ್ರೆಗೆ ದಾಖಲು

Kadaba Times News
0

 


ಕಡಬ: ಇಲ್ಲಿನ ಮುಖ್ಯ ಪೇಟೆಯ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ಬಳಿ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮಂಗಳೂರು ಆಸ್ಪತ್ರೆಗೆ ದಾಖಲಾದ  ಘಟನೆ ಡಿ.7ರಂದು  ನಡೆದಿದೆ.


ಕೋಡಿಂಬಾಳ ಗ್ರಾಮದ ಮಾಲೇಶ್ವರ ನಿವಾಸಿ ಇಸುಬು ಎಂಬವರು ಗಾಯಗೊಂಡಿದ್ದು  ಕಡಬ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು  ವೈದ್ಯರ ಸಲಹೆ ಮೇರೆಗೆ  ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


 ಕಾರು ಚಾಲಕ ಹರೀಶ್ ಎಂಬವರು  ತನ್ನ ಕಾರನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಎದುರು ಹೋಗುತ್ತಿರುವ ಮೋಟಾರ ಸೈಕಲ್ ಓವರಟೇಕ್ ಮಾಡುತ್ತಾ  ಹಿಂಬದಿಗೆ ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

 ಮೊಹಮ್ಮದ್ ಶರೀಫ್ ಎಂಬವರು ನೀಡಿದ ದೂರಿನಂತೆ  ಕಡಬ ಪೊಲೀಸ್‌‌ ಠಾಣಾ .ಕ್ರ 106/2024.ಕಲಂ: 281,125(a) BNS-2023ಯಂತೆ ಪ್ರಕರಣ ದಾಖಲಾಗಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top