ಕಡಬ: ಮರಳುಗಾರಿಕೆ ಪೆರಾಬೆ-ಚಾರ್ವಾಕ ಎರಡೂ ಗ್ರಾಮಸ್ಥರ ವಿರೋಧ ಬಳಿಕ ಎಚ್ಚೆತ್ತ ಗಣಿ ಇಲಾಖೆ: ಕೊನೆಗೂ ಜಂಟಿ ಸರ್ವೆ ಆಯ್ತು

ಕಡಬ: ಮರಳುಗಾರಿಕೆ ಪೆರಾಬೆ-ಚಾರ್ವಾಕ ಎರಡೂ ಗ್ರಾಮಸ್ಥರ ವಿರೋಧ ಬಳಿಕ ಎಚ್ಚೆತ್ತ ಗಣಿ ಇಲಾಖೆ: ಕೊನೆಗೂ ಜಂಟಿ ಸರ್ವೆ ಆಯ್ತು

Kadaba Times News
0

 

ಸರ್ವೆ ಮಾಡುತ್ತಿರುವ ಸಂದರ್ಭದಲ್ಲಿ ಅಧಿಕಾರಿಗಳು

ಕಡಬ:ಪೆರಾಬೆ ಗ್ರಾಮದ ಕುಮಾರಧಾರ ನದಿಯಲ್ಲಿ ಮರಳುಗಾರಿಕೆಗೆ ಪರವಾನಿಗೆ ಪಡೆದಿದ್ದರೂ ಗಣಿ ಇಲಾಖೆಯ ನಿಯಮಗಳನ್ನು ಪಾಲಿಸದೆ ಎಲ್ಲೆಂದರಲ್ಲಿ  ಮರಳುಗಾರಿಕೆ ಮಾಡುತ್ತಿರುವುದಕ್ಕೆ ನದಿ ಭಾಗದ ಪೆರಾಬೆ ಮತ್ತು ಚಾರ್ವಾಕ ಭಾಗದ ಎರಡೂ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು.


ಚಾರ್ವಾಕ ಭಾಗದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವಿಚಾರಕ್ಕೆ ಊರಿನ ಗ್ರಾಮಸ್ಥರೇ ಒಗ್ಗಾಟ್ಟಾಗಿದ್ದರು. ಇದೀಗ ಪೆರಾಬೆ ಗ್ರಾಮದ ನಿವಾಸಿಗಳು ರಸ್ತೆ ಹಾಳಾಗುವುದಲ್ಲದೆ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಮರಳು ಸಾಗಾಟದ ಟಿಪ್ಪರ್ ತಡೆದಿದ್ದರು.


ಗಣಿ ಇಲಾಖೆಯ ಅಧಿಕಾರಿಗಳೇ ಬರಬೇಕೆಂದು ಪಟ್ಟು ಹಿಡಿದು ಜಂಟಿ ಸರ್ವೆ ಕಾರ್ಯ ಮಾಡಬೇಕೆಂಬ ಒತ್ತಾಯದ ಮೇರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಹಾಯಕ ನಿರ್ದೇಶಕಿ ವಸುಧಾ ನೇತೃತ್ವದ ತಂಡ ಭೇಟಿ ಕಂದಾಯ ಇಲಾಖೆ ಜೊತೆ ಸರ್ವೆ ನಡೆಸಿದೆ.


ಮರಳು ಗುತ್ತಿಗೆ ಪರವಾನಿಗೆಯನ್ನು ಮೋನಪ್ಪ ಗೌಡ ಎಂಬರು ಪಡೆದುಕೊಂಡರೂ ಮತ್ತೊಬ್ಬರಿಗೆ ಅದನ್ನು ನೀಡಲಾಗಿದೆ.  ನಿಗದಿ ಪಡಿಸಿದ ಜಾಗದಲ್ಲಿ ಮಾತ್ರ ಮರಳುಗಾರಿಕೆ ನಡೆಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.


ಡಿಸೆಂಬರ್ 25ರ ವರೆಗೆ ಈ ಪ್ರದೇಶದಲ್ಲಿ  ಮರಳುಗಾರಿಕೆಗೆ ಅನುಮತಿ ಇದೆ. ಗ್ರಾಮಸ್ಥರನ್ನು ವಿಚಾರಿಸಿದಾಗ  ನಿಯಾಮಾನುಸಾರ ಮರಳು ಸಾಗಾಟ ಮಾಡಲು ಅಭ್ಯಂತರವಿಲ್ಲ ಎಂದು ಪೆರಾಬೆ ನಿವಾಸಿಗಳು ಹೇಳಿರುವುದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಹಾಯಕ ನಿರ್ದೇಶಕಿ ವಸುಧಾ ಕಡಬ ಟೈಮ್ ಗೆ ಮಾಹಿತಿ ನೀಡಿದ್ದಾರೆ.  ಈ ಸಂದರ್ಭದಲ್ಲಿ  ಕಡಬ ಠಾಣಾ ಎಸ್.ಐ ಅಭಿನಂದನ್ , ಸರ್ವೆ ಇಲಾಖೆಯ ಯಶವಂತ್ ಸೇರಿದಂತೆ ಪೆರಾಬೆ ನಿವಾಸಿಗಳು ಹಾಜರಿದ್ದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top