ಕಡಬ: ತೋಟಕ್ಕೆ ಮೇಯಲು ಹೋದ ದನದ ಕಾಲಿಗೆ ಕತ್ತಿಯಿಂದ ಕಡಿದ ಕಟುಕ!

ಕಡಬ: ತೋಟಕ್ಕೆ ಮೇಯಲು ಹೋದ ದನದ ಕಾಲಿಗೆ ಕತ್ತಿಯಿಂದ ಕಡಿದ ಕಟುಕ!

Kadaba Times News
0

ಕಡಬ ಟೈಮ್, ರಾಮಕುಂಜ:  ತೋಟಕ್ಕೆ ಮೇಯಲು ಹೋದ ದನದ ಕಾಲಿಗೆ  ಕಟುಕನೊಬ್ಬ   ಮಾರಣಾಂತಿಕ ಗಾಯ ಮಾಡಿದ ಅಮಾನವೀಯ ಘಟನೆ  ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದಿಂದ ವರದಿಯಾಗಿದೆ.

ದನದ ಕಾಲಿನಿಂದ ರಕ್ತ ಸೋರುತ್ತಿರುವುದು( KADABA TIMES)


ರಾಮಕುಂಜ ಗ್ರಾಮದ ಕೊಂಡ್ಯಾಡಿ ಎಂಬಲ್ಲಿ ಡಿ.22ರಂದು ಈ ಘಟನೆ ನಡೆದಿದೆ.  ಕೃಷಿಕೆಯಾಗಿರುವ ಮಹಿಳೆಯೊಬ್ಬರು  ತನ್ನ ತೋಟದಲ್ಲಿ ದನ ಮೇಯಲು ಬಿಟ್ಟಿದ್ದರು. ಸಂಜೆಯಾದರೂ ಮರಳಿ ಬಾರದೆ ಇರುವುದನ್ನು ಗಮನಿಸಿ ಹುಡುಕಾಡಿದ್ದರು.ಈ ವೇಳೆ ಪಕ್ಕದ ಮನೆಯ ವ್ಯಕ್ತಿಯೊಬ್ಬರ  ತೋಟದಲ್ಲಿ  ಗಂಭೀರ  ಗಾಯವಾದ  ಸ್ಥಿತಿಯಲ್ಲಿ ದನ ಬಿದ್ದಿರುವುದು ಕಂಡು ಬಂದಿದೆ. 


ದನದ ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿ ರಕ್ತ ಸೋರುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಪಕ್ಕದ ಮನೆಯ  ವ್ಯಕ್ತಿಯಲ್ಲಿ ಮಹಿಳೆ  ವಿಚಾರಿಸಿದಾಗ   "ಯಾನೆ ಕತ್ತಿಡು ಕಡ್ತಿನ  ದಾನೆ?  ಇತ್ತೆ ದಾದ ನಿಕ್ಕು ಎನನು  ದಾದ ಮಲ್ಟಿಯರ ಅಪುಂಡು ( ನಾನೇ ಕತ್ತಿಯಲ್ಲಿ ಕಡಿದದ್ದು ಈಗ, ಏನು ಈಗ…ನನ್ನನ್ನು ಏನುಮಾಡಲು ಆಗುತ್ತದೆ? )    ಚೂರು ಬೇಗ ಬತ್ತ ಇಜ್ಜಿಂಡ ಮಾಸ ಮಾಲ್ತುದು ಆತು" ( ನೀನು ಸ್ವಲ್ಪ ಬೇಗ ಬಂದಾಯ್ತು, ಇಲ್ಲದಿದ್ದರೆ ಮಾಂಸ ಮಾಡಿ ಆಗುತ್ತಿತ್ತು)  ಎಂದು ನನಗೆ ಬೈದಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.ಈ ಬಗ್ಗೆ ದೂರಿನಲ್ಲೂ ಉಲ್ಲೇಖಿಸಿದ್ದಾರೆ.


 ಮರುದಿನ  ಬೆಳಗ್ಗೆ ಆತ ನನ್ನಲ್ಲಿ ಮತ್ತೆ "ಎಂಚಾ ಪತ್ತ ಸೈತುಂಡ ಸೈಪುನೆಕ್ಕು ದುಂಬು ಯಾನ್ ಪತ ಪೊಪೆ ಕಜಿಪುಗಂಡಲ ಅವು" ( ದನ ಸತ್ತಿತಾ, ಸಾಯುವ ಮುನ್ನ ನಾನು ಕೊಂಡು ಹೋಗ್ತೆನೆ, ಪದಾರ್ಥಕ್ಕೆ  ಆದ್ರೂ ಆದೀತು)  ಎಂದು  ಹೇಳಿದ್ದು  ಇದರಿಂದ   ನನಗೆ ಮಾನಸಿಕ ಆಘಾತವಾಗಿದೆ. ದನದ ಕಾಲಿಗೆ ಕತ್ತಿಯಲ್ಲಿ ಕಡಿದ ವ್ಯಕ್ತಿಯ ಮೇಳೆ ಪ್ರಕರ್ಣ ದಾಖಲಿಸಬೇಕೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ದೂರು ಸ್ವೀಕರಿಸಿಕೊಂಡಿದ್ದಾರೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top