Video news: ಕಾಡಲ್ಲಿ ನಿಮ್ಮ ಪೊಲೀಸರೇ ಮೂರ್ನಾಲ್ಕು ಮಂದಿ ಜಾರಿ ಬಿದ್ರು...ಇಂತಹ ಕಾಡಿನಲ್ಲಿ ಒಬ್ಬನೇ ಮಾಡಲು ಸಾಧ್ಯಾನಾ?

Video news: ಕಾಡಲ್ಲಿ ನಿಮ್ಮ ಪೊಲೀಸರೇ ಮೂರ್ನಾಲ್ಕು ಮಂದಿ ಜಾರಿ ಬಿದ್ರು...ಇಂತಹ ಕಾಡಿನಲ್ಲಿ ಒಬ್ಬನೇ ಮಾಡಲು ಸಾಧ್ಯಾನಾ?

Kadaba Times News
0



ಕಡಬ: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್ ಗೌಡ (29.) ಕೆಲಸಕ್ಕೆಂದು ಹೋದವರು ಮನೆಗೆ ಹಿಂದಿರುಗದೆ ನಾಪತ್ತೆ ಬಳಿಕ ನೆಟ್ಟಣ ಬಳಿಯ ದಟ್ಟ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ.


ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರತೀಕ್ ನನ್ನು  ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳ ಪಡಿಸಿದ್ದರು. ಇದೀಗ ಮತ್ತೆ ತನಿಖೆಯ ಸಲುವಾಗಿ ಪೊಲೀಸ್ ಕಷ್ಟಡಿಗೆ ನೀಡಿರುವುದಾಗಿ ತಿಳಿದು ಬಂದಿದೆ.


ಡಿ 2 ರಂದು ಆರೋಪಿಯನ್ನು ಕೊಲೆ ಮಾಡಲಾದ ದಟ್ಟ ಕಾಡಿಗೆ ಕರೆದೊಯ್ದು ಮಾಹಿತಿ ಸಂಗ್ರಹಿಸಿದ್ದರು. ಈ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಮದ ಜನ ಸೇರಿದ್ದರು. ಒಂದು ಹಂತದಲ್ಲಿ ಆರೋಪಿಯನ್ನು ಎಳೆಯುವ ಹಂತಕ್ಕೂ ತಲುಪಿತ್ತು.ಆದರೆ ಪೊಲೀಸರ ಸಮಯ ಪ್ರಜ್ಞೆಯಿಂದ ಆತ ರಕ್ಷಣೆಗೆ ಒಳಗಾಗಿದ್ದ.


ಈ ಸಂದರ್ಭದಲ್ಲಿ ತನಿಖಾಧಿಕಾರಿಯ  ಜೊತೆ  ಗ್ರಾಮಸ್ಥರೊಬ್ಬರು ತಮ್ಮ ನೋವನ್ನು ಹಂಚಿಕೊಳ್ಳುತ್ತಿರುವ ವೀಡಿಯೋ ಎಲ್ಲೆಡೆ ಹರಿದಾಡಿದೆ. ಈ ಕೊಲೆ ಪ್ರಕರಣದಲ್ಲಿ ಎಷ್ಟು ದೊಡ್ಡ ಶಕ್ತಿಯೇ ಇರಲಿ ಬಂಧಿಸಿರಿ.ದರ್ಶನ್ ನಂತಹ ವ್ಯಕ್ತಿಯನ್ನೇ ಬಂಧಿಸಿದ್ದಾರೆ,ಅಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳಿದ್ರು ಈ ಪ್ರಕರಣದಲ್ಲೂ ನೀವು ಅದನ್ನೇ ಮಾಡಿ ಎಂದರಲ್ಲದೆ ಈ  ಕಾಡಿನಲ್ಲಿ ತಂದು ಹಾಕಿರುವ್ದು ಎಂತಹ ನೀಚ ವ್ಯಕ್ತಿಯಾಗಿರಬಹುದು, ಇಷ್ಟು ದುರ್ಗಮ ಕಾಡಿಗೆ  ಒಬ್ಬನೇ ತಂದು ಹಾಕಲು ಸಾಧ್ಯವಿಲ್ಲ ನಿಮ್ಮ ಪೊಲೀಸರೇ ಮೂರ್ನಾಲ್ಕು ಮಂದಿ ಜಾರಿ ಬಿದ್ರು…ಹಾಗದರೆ ಇಂತಹ ಕಾಡಿಗೆ ಒಬ್ಬನಿಂದ ಮಾಡಲು ಸಾಧ್ಯವೆ ಎಂದು ಪ್ರಶ್ನಿಸಿ ಹೆತ್ತ ತಾಯಿಗೆ ನ್ಯಾಯ ಕೊಡಿಸಿ ಸರಿಯಾದ ತನಿಖೆ ಮಾಡಿ ಎಂದು ಒತ್ತಾಯಿಸುತ್ತಿರುವುದು ವೀಡಿಯೋದಲ್ಲಿದೆ.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top