ಕಡಬ: ಆಡುಗಳನ್ನು ಕೊಂದು ಸಾಗಾಟ ಮಾಡಲು ತಯಾರಿ ಮಾಡುತ್ತಿದ್ದ ವೇಳೆ ಸಿಕ್ಕಿ ಬಿದ್ದ ಲೋಕಲ್ ಕಳ್ಳರು

ಕಡಬ: ಆಡುಗಳನ್ನು ಕೊಂದು ಸಾಗಾಟ ಮಾಡಲು ತಯಾರಿ ಮಾಡುತ್ತಿದ್ದ ವೇಳೆ ಸಿಕ್ಕಿ ಬಿದ್ದ ಲೋಕಲ್ ಕಳ್ಳರು

Kadaba Times News
0

ಕಡಬ ಟೈಮ್ಸ್, ಪ್ರಮುಖ ಸುದ್ದಿ : ಗುಡ್ಡದಲ್ಲಿ ಮೇಯಲು ಬಿಟ್ಟಿದ್ದ ಆಡುಗಳನ್ನು ಕಳವುಗೈದು ಕೊಂದು  ಸಾಗಾಟಕ್ಕೆ ಯತ್ನಿಸುತ್ತಿದ್ದ ವೇಳೆ ಕಳ್ಳರು  ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಘಟನೆ ಜ.27 ರ ಸಂಜೆ  ಕಡಬದ ಐತ್ತೂರು ಗ್ರಾಮದಲ್ಲಿ ನಡೆದಿದೆ.

ಆಡುಗಳನ್ನು ಕೊಂದು ಹಾಕಿರುವ ದೃಶ್ಯ(KADABA TIMES)


ಕೊಡೆಂಕೀರಿ ನಿವಾಸಿ ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಎರಡು ಆಡುಗಳನ್ನು ಸೋಮವಾರ ಸಂಜೆ ಬೈಕ್‌ನಲ್ಲಿ ಬಂದ ನಾಲ್ವರು ಲೋಕಲ್  ಕಳ್ಳರು ಹಿಡಿದು ಕೊಂದಿದ್ದಾರೆ. ತನ್ನ ಸಾಕುದನವನ್ನು ಹುಡುಕುತ್ತಾ ಹೋದ ಮಹಿಳೆಗೆ  ಎಳೆದೊಯ್ಯುತ್ತಿದ್ದ ದೃಶ್ಯ ಕಂಡು ಬಂದಿದ್ದು  ಬೊಬ್ಬೆ ಹೊಡೆದಿದ್ದಾರೆ.  ಮಹಿಳೆ ಯುವಕರನ್ನು ಪ್ರಶ್ನಿಸಿದಾಗ ನಾಯಿ ಎಂದು ಹೇಳಿದ್ದು  ಹತ್ತಿರ ಹೋಗಿ ನೋಡಿದಾಗ ಆಡು ಎಂದು ಗೊತ್ತಾಗಿದೆ. 


ಈ ಸಂದರ್ಭದಲ್ಲಿ ಆಡುಕಳ್ಳರು   ಮಹಿಳೆಯತ್ತ ಕಲ್ಲು ಸೆಯಲು ಯತ್ನಿಸಿದ್ದಾರೆ.  ಮಹಿಳೆಯು ಬೊಬ್ಬೆ ಹೊಡೆದ ಕಾರಣ  ಜನ ಸೇರಿದ್ದು  ಹೀಗಾಗಿ   ಆಡು ಸಹಿತ  ಬೈಕನ್ನು ಬಿಟ್ಟು ಆರೋಪಿಗಳು  ಪರಾರಿಯಾಗಿದ್ದಾರೆ. ರಸ್ತೆಯಲ್ಲಿ ಎರಡು ಬೈಕ್ ಆಟೋ ಇರುವುದನ್ನು ಗಮನಕ್ಕೆ ಬಂದಿದೆ.


ಆಡು ಮಾಲಿಕರು ಠಾಣೆಗೆ ದೂರು ನೀಡಿದ ಹಿನ್ನೆಲೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು ಘಟನೆಗೆ ಸಂಬಂಧಿಸಿದಂತೆ  ದ್ವಿಚಕ್ರವಾಹನ ಮತ್ತು ಆಟೋ ರಿಕ್ಷಾವೊಂದನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿ ಇರಿಸಿದ್ದಾರೆ .ಆಟೋ ಚಾಲಕನೇ ಅಂಬ್ಯುಲೆನ್ಸ್ ವೊಂದರಲ್ಲಿ ಚಾಲಕನಾಗಿಯೂ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ .   


ಈ ಆಡು ಕಳ್ಳತನದಲ್ಲಿ ಭಾಗಿಯಾದ ಮೂವರನ್ನು ವಶಕ್ಕೆ ಪಡೆದು ಪೊಲೀಸ್ ಭಾಷೆಯಲ್ಲಿ  ವಿಚಾರಿಸಿದಾಗ ಆಡು ಕಳ್ಳತನಕ್ಕೆ ಯತ್ನಿಸಿರುವುದನ್ನು ಒಪ್ಪಿಕೊಂಡಿದ್ದಾರೆ . ಸಂಘಟನೆಯೊಂದರ ವ್ಯಕ್ತಿಯೊಬ್ಬರ ಮದ್ಯಸ್ಥಿಕೆಯಲ್ಲಿ ರಾಜಿ ಸಂಧಾನ ನಡೆದಿರುವುದಾಗಿ ಹೇಳಲಾಗುತ್ತಿದು   ಈ ವೇಳೆ ಆಡುಕಳ್ಳರು  ಆಡಿನ ಮಾಲಿಕರಿಗೆ ಆಗಿರುವ ನಷ್ಟ ಪರಿಹಾರ ನೀಡಲು ಒಪ್ಪಿದ್ದಾರೆ .ಮುಂದುವರಿದ ಬೆಳವಣಿಗೆಯಲ್ಲಿ  ಮೂವರು ಒಟ್ಟು 25,000 ರೂ  ನೀಡಿರುವುದಾಗಿ ತಿಳಿದು ಬಂದಿದೆ.  ಕುಂತೂರಿನ ಓರ್ವ ವ್ಯಕ್ತಿ ಪರಾರಿಯಾಗಿರುವುದಾಗಿ ಹೇಳಲಾಗುತ್ತಿದ್ದು ಪೊಲೀಸರು ಸ್ಪಷ್ಟ ಪಡಿಸಿಲ್ಲ.  ಈ ಮೂಲಕ  ಕಳ್ಳತನ   ಪ್ರಕರಣ ರಾಜಿಯಲ್ಲಿ ಇತ್ಯರ್ಥಪಡಿಸಲಾಗಿದ್ದು ಪ್ರಕರಣ ದಾಖಲಾಗಿಲ್ಲ. 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top