ಹೆಬ್ಬಲಸು ಮರ ಕಡಿದು ಸಾಗಾಟಕ್ಕೆ ಯತ್ನ : ದಾಳಿ ವೇಳೆ ಓರ್ವ ಎಸ್ಕೇಪ್, ಇಬ್ಬರ ವಿರುದ್ದ ಪ್ರಕರಣ ದಾಖಲು

ಹೆಬ್ಬಲಸು ಮರ ಕಡಿದು ಸಾಗಾಟಕ್ಕೆ ಯತ್ನ : ದಾಳಿ ವೇಳೆ ಓರ್ವ ಎಸ್ಕೇಪ್, ಇಬ್ಬರ ವಿರುದ್ದ ಪ್ರಕರಣ ದಾಖಲು

Kadaba Times News
0

 ಎರಡು ಹೆಬ್ಬಲಸು ಮರ ಕಡಿದು ಸಾಗಾಟಕ್ಕೆ ಯತ್ನ ನಡೆಸುತ್ತಿದ್ದಾರೆಂಬ  ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು  ಸ್ಥಳಕ್ಕೆ ಧಾಳಿ ನಡೆಸಿ ಮರದ ದಿಮ್ಮಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮರದ ದಿಮ್ಮಿಗಳು ಪತ್ತೆಯಾಗಿರುವುದು(KADABA TIMES)

ಕಡಬ ಟೈಮ್ಸ್(KADABA TIMES): ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು  ಅರಂತೋಡು ಗ್ರಾಮದಲ್ಲಿ ಹೆಬ್ಬಲಸು ಮರ ಕಡಿದು ಸಾಗಾಟಕ್ಕೆ ಯತ್ನಸಿದವರ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿಯಾಗಿದೆ.


ಅರಂತೋಡು ಗ್ರಾಮದ   ಅಡ್ಕಬಳೆ – ಬನ ಎಂಬಲ್ಲಿ ಎರಡು ಹೆಬ್ಬಲಸು ಮರ ಕಡಿದು ಸಾಗಾಟಕ್ಕೆ ಯತ್ನ ನಡೆಸುತ್ತಿದ್ದಾರೆಂಬ  ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು  ಸ್ಥಳಕ್ಕೆ ಧಾಳಿ ನಡೆಸಿ ಮರದ ದಿಮ್ಮಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ತುಷಾರ ಎಂಬವರಿಗೆ ಸೇರಿದ  ಜಾಗ ದಲ್ಲಿದ್ದ ಹೆಬ್ಬಲಸು ಮರವನ್ನು ಅರಂತೋಡಿನ ಮುನೀರ್ ಎಂಬವರು ಕಡಿದು ಸಾಗಾಟಕ್ಕೆ ಯತ್ನ ನಡೆಸಿದರೆನ್ನಲಾಗಿದೆ. ಈ ಮಾಹಿತಿ ಅರಣ್ಯ ಇಲಾಖೆಯವರಿಗೆ ದೊರೆತು  ಮೇ.27ರಂದು ಸ್ಥಳಕ್ಕೆ ಹೋಗಿ ಮರದ ದಿಮ್ಮಿಗಳನ್ನು ವಶಕ್ಕೆ ಪಡೆದಿದ್ದಾರೆ.


ಇಬ್ಬರ ಮೇಲೆ ಪ್ರಕರಣ ದಾಖಲಾಗಿದ್ದು ಓರ್ವನನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮತ್ತೋರ್ವ  ತಲೆಮರೆಸಿಕೊಂಡಿದ್ದಾರೆನ್ನಲಾಗಿದೆ. ಹೆಚ್ಚಿನ ಮಾಹಿತಿ ಲಭಿಸಿಲ್ಲ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top