BREAKING- ಆಲಂಕಾರು:ಶಾಂತಿಮೊಗರು ಬಳಿ ಕಾರು - ಮಿನಿ ಟೆಂಪೋ ನಡುವೆ ಅಪಘಾತ

BREAKING- ಆಲಂಕಾರು:ಶಾಂತಿಮೊಗರು ಬಳಿ ಕಾರು - ಮಿನಿ ಟೆಂಪೋ ನಡುವೆ ಅಪಘಾತ

Kadaba Times News
0
ಕಡಬ ಟೈಮ್ಸ್,(KADABA TIMES) ಆಲಂಕಾರು:  ಶಾಂತಿಮೊಗರು ಬಳಿ ಕಾರು - ಮಿನಿ ಟೆಂಪೋ ನಡುವೆ ಅಪಘಾತ ಕುದ್ಮಾರು – ಅಲಂಕಾರು ಮುಖ್ಯ ರಸ್ತೆಯ ಶಾಂತಿಮೊಗರು ಎಂಬಲ್ಲಿ ಕಾರು ಹಾಗೂ ಮಿನಿ ಟೆಂಪೋ ನಡುವೆ ರಸ್ತೆ ಅಪಘಾತವೊಂದು ಇಂದು (ಮೇ 28) ನಡೆದಿದೆ. 


ಅಪಘಾತದಲ್ಲಿ ಮಿನಿ ಟೆಂಪೋ ರಸ್ತೆಯ ಬದಿಗೆ ಪಲ್ಟಿಯಾಗಿದೆ . ಕುದ್ಮಾರು ಕಡೆಗೆ ಹೋಗುತ್ತಿದ್ದ ಕಾರು ಮತ್ತು ಅಲಂಕಾರು ಕಡೆಗೆ ಸಾಗುತ್ತಿದ್ದ ಬೇಕರಿ ಉತ್ಪನ್ನಗಳ ವಿತರಣೆಯಲ್ಲಿದ್ದ ಲೈನ್ ಸೇಲ್ ಮಿನಿ ಟೆಂಪೋ ಪರಸ್ಪರ ಡಿಕ್ಕಿಯಾಗಿವೆ. 

 ವೇಗವೇ ಅಪಘಾತಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.  ಅಪಘಾತದ ತೀವ್ರತೆಗೆ ಟೆಂಪೋ ಸಂಪೂರ್ಣವಾಗಿ ಪಲ್ಟಿಯಾಗಿ ರಸ್ತೆ ಬದಿಗೆ ಉರುಳಿ ಬಿದ್ದಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಅಪಘಾತದ ಪರಿಣಾಮವಾಗಿ ಕೆಲ ಕಾಲ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top