Big Breaking: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಹಕಾರ ಬಳಗದ ರಮೇಶ್ ಭಟ್ ಉಪ್ಪಂಗಳ ಆಯ್ಕೆ

Big Breaking: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಹಕಾರ ಬಳಗದ ರಮೇಶ್ ಭಟ್ ಉಪ್ಪಂಗಳ ಆಯ್ಕೆ

Kadaba Times News
0

ಕಡಬ ಟೈಮ್ಸ್,  ಆಲಂಕಾರು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆಗಾಗಿ ಮಾ.2ರಂದು ಸಂಘದ ಪ್ರಧಾನ ಕಚೇರಿಯಲ್ಲಿ ಚುನಾವಣೆ ನಡೆದಿತ್ತು.



ಮತದಾನದ ಬಳಿಕ ಮತ ಎಣಿಕೆ ನಡೆದರೂ ಚುನಾವಣಾಧಿಕಾರಿಯವರು ಅಧಿಕೃತವಾಗಿ ಫಲಿತಾಂಶ ಘೋಷಣೆ ಮಾಡಿರಲಿಲ್ಲ. ಪ್ರಕರಣ ಹೈಕೋರ್ಟ್ ನಲ್ಲಿ ಇದ್ದ ಕಾರಣ ಎ.24ರಂದು ತೀರ್ಪು ಪ್ರಕಟಿಸಿತ್ತು. ರಮೇಶ್ ಭಟ್ ಉಪ್ಪಂಗಳ ಸಹಕಾರ ಬಳಗದ 10 ಹಾಗೂ ಸಹಕಾರ ಭಾರತಿಯ ಇಬ್ಬರು ನಿರ್ದೇಶಕರಾಗಿ ಆಯ್ಕೆಯಾಗಿದ್ದರು.


ರಮೇಶ್ ಭಟ್ ಉಪ್ಪಂಗಳ ಸಹಕಾರಿ ಬಳಗದ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಕೇಶವ ಗೌಡ ಆಲಡ್ಕ, ದಯಾನಂದ ರೈ ಮನವಳಿಕೆ, ರಮೇಶ್ ಯು.ಉಪ್ಪಂಗಳ , ಉದಯ ಸಾಲಿಯಾನ್, ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ರತ್ನಾ ಬಿ.ಕೆ, ಹಿಂದುಳಿದ ಪ್ರವರ್ಗ ಎ ಮೀಸಲು ಸ್ಥಾನದಿಂದ ಸ್ಪರ್ಧಿಸಿದ್ದ ವಿಜಯ ಎಸ್ ಅಂಬಾ, ಹಿಂದುಳಿದ ಪ್ರವರ್ಗ ಬಿ ಮೀಸಲು ಸ್ಥಾನದಿಂದ ಸ್ಪರ್ಧಿಸಿದ್ದ ಪದ್ಮಪ್ಪ ಗೌಡ ಕೆ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಸ್ಪರ್ಧಿಸಿದ್ದ ಕುಂಞ ಮುಗೇರ, ಪರಿಶಿಷ್ಠ ಪಂಗಡ ಮೀಸಲು ಸ್ಥಾನದಿಂದ ಸ್ಪರ್ಧಿಸಿದ್ದ ಅಶೋಕ ಪೆರಾಬೆ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಲೋಕೇಶ್ ಕಮ್ಮಿತ್ತಿಲು, ಸಹಕಾರಿ ಭಾರತಿಯ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಅಶೋಕ ಗೋಕುಲನಗರ, ಮಹಿಳಾ ಮೀಸಲು ಸ್ಥಾನದಿಂದ ಸ್ಪರ್ಧಿಸಿದ್ದ ಗಾಯತ್ರಿ ಆಯ್ಕೆಯಾಗಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top