ಕಡಬ: ಸಂಘಟನೆಯ ಪ್ರಮುಖರ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದ ಪೊಲೀಸರು

ಕಡಬ: ಸಂಘಟನೆಯ ಪ್ರಮುಖರ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದ ಪೊಲೀಸರು

Kadaba Times News
0

ಕಡಬ ಟೈಮ್ಸ್, ಪ್ರಮುಖ ಸುದ್ದಿ : .. ಜಿಲ್ಲೆಗೆ ನೂತನ ಎಸ್.ಪಿ. ಯಾಗಿ ಡಾ. ಅರುಣ್ ಕೆ. ಅವರು ಆಗಮಿಸಿದ್ದು ಕಾನೂನು ಸುವ್ಯವಸ್ಥೆ ಕಾಪಾಡುವ ಭಾಗವಾಗಿ  ಈಗಾಗಲೇ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಪರಾಧ  ಪ್ರಕರಣಗಳ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಿದ್ದಾರೆ.     



ಎಸ್.ಪಿ  ಸೂಚನೆ ಮೇರೆಗೆ ಜಿಲ್ಲೆಯ ಎಲ್ಲಾ ಠಾಣೆಗಳಲ್ಲಿ   ಪೋಲಿಸರು ಅಲರ್ಟ್ ಆಗಿದ್ದಾರೆ. ಮಧ್ಯೆ ಮೇ.30 ರಂದು ರಾತ್ರಿ ವೇಳೆ ಕಡಬ ಎಸ್.. ಹಾಗೂ ಸಿಬ್ಬಂದಿಗಳು ವಿವಿಧ ಸಂಘಟನೆಯಲ್ಲಿ ಗುರುತಿಸಿಕೊಂಡಿರುವವರ ಹಲವರ   ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ ಜಿ.ಪಿ.ಎಸ್. ಪೋಟೋ ತೆಗೆದುಕೊಂಡು ಹೋಗಿರುವ ಘಟನೆ ನಡೆದಿದೆ


ಪೊಲೀಸರು ಮನೆಗೆ ರಾತ್ರಿ ವೇಳೆ ದಿಢೀರ್ ಭೇಟಿ ನೀಡಿ ಫೋಟೋ ತೆಗೆದುಕೊಂಡ ಬೆಳವಣಿಗೆಯಿಂದ ಕೆಲ ಸಂಘಟನೆಯ ಮುಖಂಡರುಗಳು ತಬ್ಬಿಬ್ಬುಗೊಂಡಿದ್ದರು.ಅಲ್ಲದೆ ಮನೆಮಂದಿ ಆತಂಕಕ್ಕೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದರು. ಪೊಲೀಸರು ಮನವರಿಕೆ ಮಾಡುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.


ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ  ಕಾಪಾಡುವ ಭಾಗವಾಗಿ ಮೇಲಾಧಿಕಾರಿಗಳ ನಿರ್ದೇಶನದಂತೆ ಮುಖಂಡರುಗಳ‌ ಮಾಹಿತಿ ಸಂಗ್ರಹಿಸಿದ್ದೇವೆ. ಸಮಾಜದ ಸ್ವಾಸ್ಥ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ ಯಾಗಿದೆ. ಪೊಲೀಸ್ ಇಲಾಖೆ ಜೊತೆ ಎಲ್ಲರ ಸಹಕಾರ,ಬೆಂಬಲ ಅಗತ್ಯವಾಗಿದೆ.-ಅಕ್ಷಯ ಡವಗಿ ,ತನಿಖಾ‌ ಎಸ್.ಐ, ಕಡಬ ಠಾಣೆ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top