ಬೆಳ್ತಂಗಡಿ : ಎರಡು ತಿಂಗಳ ಹಿಂದೆ ಮದುವೆಯಾದ ದಂಪತಿ ಹನಿಮೂನ್ ಗೆ ಬಂದು ಉಜಿರೆಯ ಹೊಟೇಲ್ ನಲ್ಲಿ ಉಳಿದುಕೊಂಡು ರಾತ್ರಿ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೆ ಯತ್ನಿಸಿದ ಪತಿಯನ್ನು ಬಂಧಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಂಗಳೂರು ರಾಮನಗರ ಜಿಲ್ಲೆಯ ಬಿಡದಿ
ತಾಲೂಕಿನ ನಂದಗೋಕುಲ ನಿವಾಸಿಯಾಗಿರುವ ವಿಶ್ವನಾಥ (24) ಮತ್ತು 22 ವರ್ಷದ ಯುವತಿ 2025ರ ಮೇ 22ರಂದು
ಮದುವೆಯಾಗಿದ್ದು, ಜುಲೈ 22 ರಂದು ರಾತ್ರಿ ಉಜಿರೆಯ
ಹೊಟೇಲಿಗೆ ಬಂದು ರೂಂ ಪಡೆದು ತಂಗಿದ್ದರು. ಹೊಟೇಲ್ ರೂಂ ನಲ್ಲಿ ಜುಲೈ 22 ರಂದು ರಾತ್ರಿ ಕುಡಿದ ಮತ್ತಿನಲ್ಲಿ
ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿ
ಪತ್ನಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಜುಲೈ 23 ರಂದು ಸಂಜೆ ಪತಿ ವಿಶ್ವನಾಥ ಎಂಬಾತನ ವಿರುದ್ಧ ದೂರು
ನೀಡಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪತಿ
ವಿಶ್ವನಾಥ ವಿರುದ್ಧ BNS 109,115(1), 85 ,4DP (ಕೊಲೆಯತ್ನ, ಹಲ್ಲೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ
ಬೇಡಿಕೆ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತಿ ವಿಶ್ವನಾಥ್ ನನ್ನು ಪೊಲೀಸರು ಬಂಧಿಸಿ
ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
A newlywed couple from Ramanagara
stayed at a hotel in Ujire for their honeymoon, where the husband, Vishwanath
(24), allegedly harassed his wife for dowry, assaulted her, and attempted to
kill her on July 22. The wife filed a complaint on July 23 at Belthangady
police station. Vishwanath was arrested, and a case under BNS sections 109,
115(1), 85, and 4DP was registered. He has been remanded to 14 days of judicial
custody.



