ಕಡಬ ಟೈಮ್ಸ್ (KADABA TIMES): ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಕಡಬದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗದ್ದುಗೆಗೆ ಏರಿಸುವುದು ಮುಂದಿನ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗೆ ದಿಕ್ಕೂಚಿಯಾಗಲಿದೆ. ಆ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಬೇಕು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕಡಬ ಪಟ್ಟಣ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ
ಸಂಜೆ ಕಡಬ ಅನುಗ್ರಹ ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು ಬಿಜೆಪಿಯ
ಭದ್ರಕೋಟೆ ಎನಿಸಿಕೊಂಡಿದ್ದ ಮಡಿಕೇರಿಯನ್ನು ಕಾಂಗ್ರೇಸ್ ಛಿದ್ರಮಾಡಿದೆ. ಮುಂದೆ ಇಲ್ಲಿನ ಸರದಿಯಾಗಲಿದೆ ಎಂದು ಹೇಳಿದ ಸಚಿವರು, ರಾಜ್ಯ
ಸರಕಾರದ ಜನಪರ ಗ್ಯಾರಂಟಿ ಯೋಜನೆಗಳನ್ನು ಕಡಬ ಪಪಂ ಚುನಾವಣೆ ಯಲ್ಲಿ ಮತಗಳಾಗಿ ಪರಿವರ್ತಿಸಿ ಅಧಿಕಾರ
ಪಡೆಯಬೇಕು ಎಂದರು.
..ಕೆಪಿಸಿಸಿ ಉಪಾಧ್ಯಕ್ಷ ಎಂ.ಸಿ.ವೇಣುಗೋಪಾಲ್, ಮಾಜಿ ಸಚಿವರಾದ
ಬಿ. ರಮಾನಾಥ ರೈ, ಅಭಯ ಚಂದ್ರ ಜೈನ್, ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ,
ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಕೆಪಿಸಿಸಿ ಪ್ರಧಾನ ಕಾವ್ಯದರ್ಶಿ ಎಂ.ಎಸ್.ಮಹಮ್ಮದ್ ಮಾತನಾಡಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್
ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತ ಗಟ್ಟಿ ಕೆಪಿಸಿಸಿ ಸಂಯೋಜಕ
ಕೃಷ್ಣಪ್ಪ ಜಿ. ರಾಮಕುಂಜ, ಮುಖಂಡರಾದ ಎ.ಸಿ. ವಿನದುರಾಜ್, ಸದಾಶಿವ ಉಳ್ಳಾಲ್,
ಭರತ್ ಮುಂಡೋಡಿ, ಶಾಲೆಟ್ ಪಿಂಟೊ, ಶಾಹುಲ್ ಹಮೀದ್, ಸುಭಾಶ್ಚಂದ್ರ ಶೆಟ್ಟಿ ಚಿತ್ತರಂಜನ್ ಪ್ರಸಾದ್,
ಸತೀಶ್ ಕೆಡೆಂಜಿ, ಜೋಕಿಮ್, ಅಪ್ಪಿ, ಶುಭೋದಯ ಆಳ್ವ ಉಷಾ ಅಂಚನ್, ಫೈಝಲ್ ಎಸ್.ಇ.ಎಸ್., ಕಡಬ ತಾಲೂಕು
ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ. ಸ್ವಾಗತಿಸಿದರು. ಜಿ.ಪಂ. ಮಾಜಿ ಸದಸ್ಯ ಪಿ.ಪಿ.ವರ್ಗೀಸ್
ವಂದಿಸಿದರು. ಅಶ್ರಫ್ ಶೇಡಿಗುಂಡಿ ನಿರೂಪಿಸಿದರು.
Minister Dinesh Gundu Rao said winning the Kadaba Town Panchayat election is key for Congress’s future success in Taluk and Zilla Panchayat polls. He urged converting government schemes into votes. Senior Congress leaders and local members participated in the event held at Anugraha Hall, Kadaba.



