ಕಡಬ ಪಟ್ಟಣ ಪಂಚಾಯತ್ ಎಲೆಕ್ಷನ್:10 ವಾರ್ಡ್ ಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದ ಬಿಜೆಪಿ

ಕಡಬ ಪಟ್ಟಣ ಪಂಚಾಯತ್ ಎಲೆಕ್ಷನ್:10 ವಾರ್ಡ್ ಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದ ಬಿಜೆಪಿ

Kadaba Times News
0

 ಕಡಬ ಟೈಮ್ಸ್ (KADABA TIMES): ಇಲ್ಲಿನ ಪಟ್ಟಣ ಪಂಚಾಯತ್ ನ 13 ವಾರ್ಡ್ ಗಳ ಪೈಕಿ 10 ವಾರ್ಡ್ ಗಳಿಗೆ ಬಿಜೆಪಿಯಿಂದ ತನ್ನ ಅಭ್ಯರ್ಥಿಗಳನ್ನು ಘೋಷನೆ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.



ವಾರ್ಡ್ 2 ಕೋಡಿಬೈಲು ಇಲ್ಲಿಗೆ ಮಿಸಲಾದ ಪರಿಶಿಷ್ಟ ಜಾತಿ ಮಹಿಳೆ ಸ್ಥಾನಕ್ಕೆ ಕುಸುಮ ಅಂಗಡಿಮನೆ, ವಾರ್ಡ್ 3, ಪನ್ಯ ಸಾಮಾನ್ಯ ಸ್ಥಾನಕ್ಕೆ ಆದಂ ಕುಂಡೋಳಿ,ವಾರ್ಡ್ 4 ಬೆದ್ರಾಜೆ ಸಾಮಾನ್ಯ ಸ್ಥಾನಕ್ಕೆ ಅಶೋಕ್ ಪಿ, ಮಾಲೇಶ್ವರ 5. ವಾರ್ಡಿಗೆ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಪ್ರಕಾಶ್ ಎನ್.ಕೆ, ಕಡಬ 6 ನೇ ವಾರ್ಡಿನ ಮಹಿಳೆ ಸ್ಥಾನಕ್ಕೆ ಪ್ರೇಮ, ಪಿಜಕಳ 8ನೇ ವಾರ್ಡಿನ ಸಾಮಾನ್ಯ ಸ್ಥಾನಕ್ಕೆ ದಯಾನಂದ ಪಿ. ಮೂರಾಜೆ 9ನೇ ವಾರ್ಡಿನ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಕುಂಞಣ್ಣ ಕುದ್ರಡ್ಕ, ದೊಡ್ಡಕೊಪ್ಪ 10ನೇ ವಾರ್ಡಿನ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಗುಣವತಿ ರಘುರಾಮ, ಕೋಡಿಂಬಾಳ 11ನೇ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಅಕ್ಷತಾ, ಪುಳಿಕುಕ್ಕು 13ನೇ ವಾರ್ಡ್‌ ನ ಪರಿಶಿಷ್ಠ ಪಂಗಡ ಸ್ಥಾನಕ್ಕೆ ಸದಾನಂದ ನಾಯ್ಕ್ ಅವರನ್ನು ಅಭ್ಯರ್ಥಿಗಳಾಗಿ ಪೋಷಣೆ ಮಾಡಲಾಗಿದೆ. 


ಇನ್ನು ಉಳಿದ  3 ವಾರ್ಡು ಗಳ (ಕಳಾರ, ಪಣೆಮಜಲು, ಮಜ್ಜಾರು)  ಅಭ್ಯರ್ಥಿಗಳ ಘೋಷಣೆ ಇನ್ನಷ್ಠೆ ಪ್ರಕಟವಾಗಬೇಕಿದೆ. ವಾರ್ಡುಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಸ್ವ ಪಕ್ಷದಲ್ಲೇ ಪೈಪೋಟಿ ಇದ್ದರೂ ಪಕ್ಷದ ನಾಯಕರು ಅವುಗಳನ್ನು ನಿಭಾಯಿಸಿದ್ದಾರೆ ಎನ್ನಲಾಗಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top