2020ನೇ ಸಾಲಿನ upsc ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ

2020ನೇ ಸಾಲಿನ upsc ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ

Kadaba Times News
0

ಕಡಬ ಟೈಮ್ಸ್, ಮುಖ್ಯ ಸುದ್ದಿ:  ಕೇಂದ್ರ ಲೋಕಸೇವಾ ಆಯೋಗ ( ಯುಪಿಎಸ್‌ಸಿ)  2020ನೇ ಸಾಲಿನ ನಾಗರಿಕ ಸೇವೆಗಳ ಪೂರ್ವಭಾವಿ (ಪ್ರಿಲಿಮ್ಸ್) ಮತ್ತು ಮುಖ್ಯ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಅಕ್ಟೋಬರ್ 4ರಂದು ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಗಳು ನಡೆಯಲಿದ್ದು, 2021ರ ಜನವರಿ 8ರಂದು ಮುಖ್ಯ ಪರೀಕ್ಷೆ ನಡೆಯಲಿದೆ. ಇದಕ್ಕೂ ಮೊದಲು ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಮೇ 20ಕ್ಕೆ ನಿಗದಿಯಾಗಿತ್ತು. ಕೋವಿಡ್-19 ಪರಿಣಾಮ ಪರೀಕ್ಷೆಯನ್ನು ಆಯೋಗ ಮುಂದೂಡಿತ್ತು.

2019ನೇ ಸಾಲಿನ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ಭಾಗವಾಗಿರುವ ವ್ಯಕ್ತಿತ್ವ ಪರೀಕ್ಷೆ 2020ರ ಜುಲೈ 20ರಿಂದ ಮುಂದುವರಿಯಲಿದೆ. 2020ನೇ ಸಾಲಿನ ಎನ್‌ಡಿಎ ಮತ್ತು ಎನ್‌ಎ ಪರೀಕ್ಷೆಗಳು ಸೆಪ್ಟೆಂಬರ್ 6ರಂದು ನಿಗದಿಯಾಗಿದೆ. ಐಇಎಸ್/ಐಎಸ್‌ಎಸ್ 2020 ಪರೀಕ್ಷೆ ಅಕ್ಟೋಬರ್ 16ರಂದು ಹಾಗೂ ಎಂಜಿನಿಯರಿಂಗ್ ಸರ್ವೀಸಸ್ ಮುಖ್ಯ ಪರೀಕ್ಷೆ ಆಗಸ್ಟ್ 9ರಂದು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣ : https://www.upsc.gov.in/ ವನ್ನು ಗಮನಿಸುವುದು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top