ಕಡಬ ಟೈಮ್ಸ್,ಪಟ್ಟಣ ಸುದ್ದಿ :ಕಡಬದ ವ್ಯಕ್ತಿಗೆ ಕೊರೋನಾ ಸೋಂಕು ಪತ್ತೆಯಾದ ಸುದ್ದಿ ಎಲ್ಲೆಡೆ ಹರಡಿದ್ದು ಕಡಬ ಪೇಟೆಯತ್ತ ಬರುವ ಜನರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.
ಸೋಂಕಿತ ವ್ಯಕ್ತಿ ಕಡಬದ ಮುಖ್ಯ ಪೇಟೆಯ ಹಲವು ಅಂಗಡಿಗಳಿಗೆ ಬಂದಿರುವ ಬಗ್ಗೆ ಸುದ್ದಿ ತಿಳಿದ ಜನರು ಆದಿತ್ಯವಾರದಂದು ಪೇಟೆಯತ್ತ ಸುಳಿಯದೆ ಕಟ್ಟುನಿಟ್ಟಿನ ಲಾಕ್ ಡೌನ್ ನಿಯಮವನ್ನು ನೆನಪಿಸುವಂತೆ ಮಾಡಿದ್ದಾರೆ. ಮೆಡಿಕಲ್ ಶಾಪ್ ಮತ್ತು ಮದ್ಯದಂಗಡಿಯಲ್ಲಿ ಜನರು ಇರುವುದು ಬಿಟ್ಟರೆ ಬಹುತೇಕ ಅಂಗಡಿಗಳಲ್ಲಿ ಗ್ರಾಹಕರಿಲ್ಲ. ಈ ನಡುವೆ ಮಧ್ಯಾಹ್ನದ ನಂತರ ಕೆಲ ಅಂಗಡಿಗಳ ವಾರಿಸುದಾರು ತಮ್ಮ ಅಂಗಡಿಗಳನ್ನು ಮುಚ್ಚಿದ್ದಾರೆ.
ಪೇಟೆಯಲ್ಲಿ ಮುಖ್ಯ ವ್ಯವಹಾರ ಹೊರತುಪಡಿಸಿ ಉಳಿದ ಎಲ್ಲಾ ಕಡೆ ಜನರು ಸುಳಿದಾಡಿಲ್ಲ.ಬಾಡಿಗೆಗಾಗಿ ಹಲವು ವಾಹನಗಳು ಮುಂಜಾನೆಯಿಂದ ಸಾಯಂಕಾಲದ ವರೆಗೆ ನಿಂತಿರುವುದು ಕಂಡ್ ಬಂತು. ಆಟೋ ನಿಲ್ದಾಣದಲ್ಲೂ ರಿಕ್ಷಾ ಗಳ ಸಂಖ್ಯೆ ಕಡಿಮೆ ಇತ್ತು. ಇನ್ನು ಬ್ಯಾಂಕ್ ಗಳ ಶಾಖೆ ಮುಂದೆ ಜನರು ಸಾಲುಗಟ್ಟಿನಿಂತಿರುವುದು ಕಂಡು ಬಂದಿಲ್ಲ. ಕೆ.ಎಸ್ ಆರ್.ಟಿ ಸಿ ಯಿಂದ ಬಸ್ ವ್ಯವಸ್ಥೆ ಕಲ್ಪಿಸಿದರೂ ಜನರಿಲ್ಲದೆ ಬಸ್ ನಿರ್ವಾಹಕ ಮತ್ತು ಚಾಲಕರು ಕಾಯುತ್ತಿದ್ಕಂದ್ಡರು. ಉಳಿದಂತೆ ಫ್ಯಾನ್ಸಿ, ಹಾರ್ಡ್ ವೇರ್ ಶಾಪ್, ದಿನಸಿ ಅಂಗಡಿ,ಬಟ್ಟೆ ಮಳಿಗೆ,ಹೋಟೆಗಳು ತೆರೆದಿದ್ದರೂ ಗ್ರಾಹಕರು ಕಂಡು ಬಂದಿಲ್ಲ.
ಕೊರೋನಾ ಸೋಂಕಿನ ಭಯ ಜನರಲ್ಲಿ ಕಾಡಿದ್ದು ಬಹುತೇಕರು ಮನೆಯಲ್ಲೇ ಉಳಿದುಕೊಂಡದ್ದು ಸುಳ್ಳಲ್ಲ.


