ಕಡಬ: 94 ಸಿ ಯಲ್ಲಿ ಹಕ್ಕು ಪತ್ರ ಕೊಟ್ಟು ನಂತರ ಕಸಿದುಕೊಂಡ ಕಂದಾಯ ಅಧಿಕಾರಿಗಳು, ಸೂಕ್ತ ತನಿಖೆ ನಡೆಸುವಂತೆ ಮಾಹಿತಿ ಹಕ್ಕು ಕಾರ್ಯಕರ್ತ ಜಯನ್ ಟಿ ಆಗ್ರಹ

ಕಡಬ: 94 ಸಿ ಯಲ್ಲಿ ಹಕ್ಕು ಪತ್ರ ಕೊಟ್ಟು ನಂತರ ಕಸಿದುಕೊಂಡ ಕಂದಾಯ ಅಧಿಕಾರಿಗಳು, ಸೂಕ್ತ ತನಿಖೆ ನಡೆಸುವಂತೆ ಮಾಹಿತಿ ಹಕ್ಕು ಕಾರ್ಯಕರ್ತ ಜಯನ್ ಟಿ ಆಗ್ರಹ

Kadaba Times News
0

ಕಡಬ ಟೈಮ್ಸ್,ಕುಟ್ರುಪ್ಪಾಡಿ: 94 ಸಿ ಅಡಿಯಲ್ಲಿ ಹಕ್ಕು ಪತ್ರ ನೀಡಲಾದ ಜಮೀನಿನಲ್ಲಿದ್ದ  ಮನೆಯನ್ನು ಕಂದಾಯ ಇಲಾಖೆ ತರಾತುರಿಯಲ್ಲಿ ತೆರವುಗೊಳಿಸಿರುವ  ಘಟನೆ ಕುಟ್ರುಪ್ಪಾಡಿಗ್ರಾ.ಪಂ ವ್ಯಾಪ್ತಿಯ  ಬಲ್ಯ ಗ್ರಾಮದ ಪಂಜಾಜೆ ಎಂಬಲ್ಲಿ ನಡೆದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಮಾಹಿತಿ ಹಕ್ಕು  ಕಾರ್ಯಕರ್ತ, ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್ ಟಿ. ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿಷಯ ವಿವರಿಸಿದ ಜಯನ್ ,  ಲಕ್ಷ್ಮೀ ಎಂಬವರು ತನ್ನ ಮಕ್ಕಳೊಂದಿಗೆ ಕಳೆದ ಹಲವು ವರ್ಷಗಳಿಂದ ಕಡಬ ತಾಲೂಕಿನ ಬಲ್ಯ ಗ್ರಾಮದ ಪಂಜಾಜೆಯಲ್ಲಿರುವ ಸರ್ಕಾರಿ ಭೂಮಿಯಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು.  ಈ ಜಾಗಕ್ಕೆ ಈಗಾಗಲೇ 94 ಸಿ ಅಡಿಯಲ್ಲಿ ಹಕ್ಕು ಪತ್ರವನ್ನು ಸರ್ಕಾರದಿಂದ ನೀಡಲಾಗಿದ್ದು, ಕೆಲ ದಿನಗಳ ಹಿಂದೆ ಕಡಬ ತಹಶೀಲ್ದಾರರ ಕಛೇರಿಯಿಂದ ನೋಟೀಸ್ ಬಂದಿದ್ದು, ನೀವು ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿದ್ದು ‌ಸರಿಯಾದ ದಾಖಲೆಗಳನ್ನು ನೀಡಿ ಹಕ್ಕು ಪತ್ರ ಪಡೆಯಲಾಗಿಲ್ಲ. ಆದುದರಿಂದ ನಿಮ್ಮ ಮನೆಯನ್ನು ತೆರವು ಮಾಡಲಾಗುವುದು ಎಂದು ತಿಳಿಸಲಾಗಿದೆ. ಅಲ್ಲದೆ ಮನೆಯನ್ನು ಅಧಿಕಾರಿಗಳ ಸಮ್ಮುಖದಲ್ಲಿ ನೆಲಸಮ ಮಾಡಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ‌ ನಡೆಸುವಂತೆ ಆಗ್ರಹಿಸಿದರು.

ಲಕ್ಷ್ಮೀ ಅವರಿಗೆ ಈ ಬೇರೆ ಒಂದು ಮನೆ ಇದೆ.ಆದರೆ ಹಲವಾರು ವರ್ಷಗಳಿಂದ ಈ ಮನೆ ಹಾಗೂ ಜಾಗದ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದೆ. ಹೀಗಾಗಿ ಮೂಲಭೂತ ಸೌಕರ್ಯಗಳಿಂದ  ಈ ಬಡ ಕುಟುಂಬ ವಂಚಿತವಾಗಿದೆ.ಹಾಗಾಗಿ 94c ಯಲ್ಲಿ ಅರ್ಜಿ ಸಲ್ಲಿಸಿದ ಪ್ರತಿಫಲವಾಗಿ ಹಕ್ಕು ಪತ್ರ ಲಭಿಸಿತ್ತು. ಇದೀಗ ಹಕ್ಕು ಪತ್ರ ರದ್ದಾಗಿರೊದು ಬಡಕುಟುಂಬ ಬೀದಿಗೆ ಬೀಳುವಂತಾಗಿದೆ. ಹಲವಾರು ಕಡೆ ಸರಕಾರಿ ಭೂಮಿಯಲ್ಲಿ  ನಿರ್ಮಾಣ ಮಾಡಿರುವ ಮನೆಗಳನ್ನು ತೆರವು ಮಾಡಿರುವ ಕಂದಾಯ ಇಲಾಖೆ ಅವುಗಳನ್ನು ತಮ್ಮ ವಶಕ್ಕೆ ಪಡೆಯಲು ಮುಂದಾಗುತ್ತಿಲ್ಲ, ಆದರೆ ಈ ಬಡ ಮಹಿಳೆಯ ಜಾಗದ ವಿಚಾರದಲ್ಲಿ ಮಾನವೀಯತೆ ಮರೆತು ಅಧಿಕಾರಿಗಳು ನಡೆಕೊಂಡಿದ್ದಾರೆ ಎಂದು ಆರೋಪಿಸಿದ ಜಯನ್   ಈ ವೃದ್ಧ ಮಹಿಳೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top