ಕಡಬ ಟೈಮ್ಸ್, ಸುಬ್ರಹ್ಮಣ್ಯ: ಲಾಕ್ ಡೌನ್ ತೆರವಿನ ಬಳಿಕ ದೇವಸ್ಥಾನ ತೆರೆಯುತಿದ್ದು ಈ ಸಂದರ್ಭ ಕುಕ್ಕೆ ದೇಗುಲದಲ್ಲಿ ಅನ್ನದಾನ ವ್ಯವಸ್ಥೆ ಕೂಡ ಆರಂಭಿಸುವಂತೆ ಸುಬ್ರಹ್ಮಣ್ಯದ ರವೀಂದ್ರ ಕುಮಾರ್ ಆಗ್ರಹಿಸಿದ್ದಾರೆ.
ರಾಜ್ಯದ ಪ್ರಮುಖ ಧಾಮಿ೯ಕ ಕೇಂದ್ರವಾಗಿರುವ ಕುಕ್ಕೆ ದೇಗುಲವು ಲಾಕ್ ಡೌನ್ ಸಡಿಲಿಕೆ ಬಳಿಕ ರಾಜ್ಯ ಧಾಮಿ೯ಕ ದತ್ತಿ ಇಲಾಖೆ ಮತ್ತು ದೇವಸ್ಥಾನದ ಆಡಳಿತ, ಭಕ್ತಾಧಿಗಳಿಗೆ ಕಟ್ಟುನಿಟ್ಟಿನ ಆದೇಶಗಳ ಪಾಲನೆಯ ಪ್ರವೇಶ ದೊಂದಿಗೆ ,ಶ್ರೀದೇವರ ದಶ೯ನಕ್ಕೆ ವೆವಸ್ಥೆ ಮಾಡಿದೆ.
ಪ್ರಸ್ತುತ ಕ್ಷೇತ್ರದಲ್ಲಿ ಅನ್ನದಾನ ಸದ್ಯದಮಟ್ಟಿಗೆ ತಡೆಹಿಡಿಯಲಾಗಿದೆ. ಈಗ ಬದಲಾದ ಸನ್ನಿವೇಷದಲ್ಲಿ ಅನ್ನದಾನದ ಕುರಿತಾಗಿ ಮತ್ತೊಮ್ಮೆ ಮರುಪರಿಶೀಲನೆ ಮಾಡಿ ಸಾಮಾಜಿಕ ಅಂತರ ಕಾಪಾಡಿಕೊಂಡಾದರೂ ಅನ್ನದಾನ ವ್ಯವಸ್ಥೆ ಮಾಡಬೇಕು. ಕ್ಷೇತ್ರ ದೇವರಾದ ಶ್ರೀ ಅನ್ನದಾನ ಸುಬ್ಬಪ್ಪನ ಅನ್ನದಾನ ಸೇವೆ ಯಾವುದಾದರೊಂದು ರೂಪದಲ್ಲಿ ನಡಯಲೇ ಬೇಕು ಈ ಬಗ್ಗೆ ಹಿಂದೂ ಧಾಮಿ೯ಕದ ತ್ತಿ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರವೀಂದ್ರ ಕುಮಾರ್ ವಿನಂತಿಸಿದ್ದಾರೆ.


