ಡಿಕೆಶಿ ಪದಗ್ರಹಣ ಹಿನ್ನೆಲೆ, ತಾಲೂಕು ಉಸ್ತುವಾರಿಗಳ ಸಭೆ

ಡಿಕೆಶಿ ಪದಗ್ರಹಣ ಹಿನ್ನೆಲೆ, ತಾಲೂಕು ಉಸ್ತುವಾರಿಗಳ ಸಭೆ

Kadaba Times News
0

ಕಡಬ ಟೈಮ್ಸ್, ಸುಳ್ಯ ವಿಧಾನ ಸಭಾಕ್ಷೇತ್ರ: ಕೆ.ಪಿ.ಸಿ.ಸಿ.ಯ ನೂತನ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುವ  ಡಿ.ಕೆ.ಶಿವಕುಮಾರ್‌ರವರ ಪದಗ್ರಹಣ ಸಮಾರಂಭವನ್ನು ಪ್ರತೀ ಗ್ರಾಮ ಪಂಚಾಯತ್‌ನಲ್ಲಿ ವೀಕ್ಷಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಸಲುವಾಗಿ ಪ್ರತೀ ಗ್ರಾ.ಪಂ.ಗಳಿಗೆ ಒಬ್ಬೊಬ್ಬರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.

ಉಸ್ತುವಾರಿಗಳ ಸಭೆಯು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಅಧ್ಯಕ್ಷತೆಯಲ್ಲಿ ಜರುಗಿತು. ಕೆ.ಪಿ.ಸಿ.ಸಿ.ಯಿಂದ ವೀಕ್ಷಕರಾಗಿ ನೇಮಕಗೊಂಡಿರುವ ಕೃಷ್ಣಪ್ಪರವರು ಮಾರ್ಗದರ್ಶನ ನೀಡಿದರು.

ಸಭೆಯಲ್ಲಿ ರಾಜಾರಾಂ ಬೆಟ್ಟ, ಕೆ.ಎಂ.ಮುಸ್ತಫ, ಸುಧೀರ್ ರೈ ಮೇನಾಲ, ನಂದರಾಜ್ ಸಂಕೇಶ, ಸಚಿನ್‌ರಾಜ್ ಶೆಟ್ಟಿ, ಪ್ರವೀಣ್ ಮರುವಂಜ, ಶರೀಫ್ ಕಂಠಿ, ಅನಿಲ್ ರೈ ಬೆಳ್ಳಾರೆ, ಆನಂದ ಬೆಳ್ಳಾರೆ, ಶ್ರೀಹರಿ ಕುಕ್ಕುಡೇಲು, ದೀಪಕ್ ರೈ, ಗಂಗಾಧರ ಅಜ್ಜಾವರ ಭಾಗವಹಿಸಿದ್ದರು. ಭವಾನಿಶಂಕರ ಕಲ್ಮಡ್ಕ ಕಾರ್ಯಕ್ರಮ ಸಂಯೋಜನೆ ಮಾಡಿದರು.

 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top