ಕಡಬ ಟೈಮ್ಸ್ (KADABA TIMES): ಕಡಬ ತಾಲೂಕಿನ ಗುಂಡ್ಯದಲ್ಲಿ ಶವವೊಂದು ಪತ್ತೆಯಾಗಿದೆ.
ಸುಬ್ರಹ್ಮಣ್ಯ ಮಾರ್ಗವಾಗಿ ಹೋಗುವ ಗುಂಡ್ಯ ಸೇತುವೆಯ ಅಡಿಯಲ್ಲಿ ಮಂಗಳವಾರ ಮುಂಜಾನೆ ಅಪಚರಿತ ಶವವೊಂದು ಕಂಡು ಬಂದಿದ್ದು, ಯಾರೋ ಕೊಲೆಗೈದು ಶವ ಬೀಸಾಡಿರುವ ಶಂಕೆ ವ್ಯಕ್ತವಗಿದೆ.
ಸದ್ಯ ಶವ ಪತ್ತೆಯಾದ ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಎಸೈ ಈರಯ್ಯ ಡಿ.ಎನ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮೃತ ವ್ಯಕ್ತಿಯ ಮಾಹಿತಿ ಕಲೆ ಹಾಕುವಲ್ಲಿ ತನಿಖೆ ನಡೆಸುತ್ತಿದ್ದಾರೆ.ಆದರೆ ಮೃತ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ.


