ಕಡಬ ಟೈಮ್ಸ್, ಮುಖ್ಯ ಸುದ್ದಿ: ದೀಢೀರ್ ರಕ್ತದೊತ್ತಡ ಕುಸಿತಕ್ಕೊಳಗಾಗಿ ಕೂಜುಗೋಡು ಕಟ್ಟೆಮನೆ ಮನೆತನದ ಯುವತಿ ಬೆಂಗಳೂರಿನಲ್ಲಿ ಮೃತರಾಗಿದ್ದಾರೆ.
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ದಿನೇಶ್ ಕೂಜುಗೋಡು ಕಟ್ಟೆಮನೆಯವರ ೨ನೇ ಪುತ್ರಿ ಪ್ರತೀಕ್ಷಾ (21 ವರ್ಷ) ಮೃತ ಪಟ್ಟ ಯುವತಿ.
ಮಂಗಳೂರಿನ ಶ್ರೀನಿವಾಸ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಇವರು ಬೆಂಗಳೂರಿನ ಮನೆಗೆ ಹೋಗಿದ್ದರು ನಿನ್ನೆ ರಾತ್ರಿ ದಿಢೀರ್ ಲೋಬಿಪಿಗೆ ಒಳಗಾಗಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನೊಪ್ಪಿರುವುದಾಗಿ ಮಾಹಿತಿ ಲಭಿಸಿದೆ.


