ಕಡಬ ಟೈಮ್ಸ್, ನೆಲ್ಯಾಡಿ: ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯನ್ನು ಅವರ ಮಕ್ಕಳ ಜೊತೆಗೆ ಹಿಂದೂ ಜಾಗರಣ ವೇದಿಕೆ ನೆಲ್ಯಾಡಿ ಘಟಕದ ಕಾರ್ಯಕರ್ತರು ನೆರವೇರಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಅರಸಿನಮಕ್ಕಿ ಉಡ್ಯೆರೆ ನಿವಾಸಿ ಪದ್ಮಯ್ಯ ಗೌಡರ ಪತ್ನಿ ಕುಸುಮಾವತಿ ಎಂಬವರು ಕೋವಿಡ್ ನಿಂದ ಮೃತರಾಗಿದ್ದರು. ಹೀಗಾಗಿ ಹಿಂದೂ ಜಾಗರಣ ವೇದಿಕೆ ನೆಲ್ಯಾಡಿ ಘಟಕದ ಸದಸ್ಯರು ಪಿ.ಪಿ.ಇ ಕಿಟ್ ಧರಿಸಿ, ಹಿಂದೂ ಧರ್ಮದ ವಿಧಿ ವಿಧಾನದಂತೆ ಅಂತ್ಯಸಂಸ್ಕಾರವನ್ನು ನೆರವೇರಿಸಿದರು.

ಸಂಘಟನೆಯ ಕೃಷ್ಣಪ್ಪ ಕಟ್ಟೆಮಜಲು, ಕುಶಾಲಪ್ಪ ನೆಲ್ಯಾಡಿ, ಲೋಕೇಶ್ ಕೊಲ್ಯೊಟ್ಟು , ಅನಿಲ್ ರೈ ಹಾರ್ಪಳ , ರವಿಪ್ರಸಾದ್ ಶೆಟ್ಟಿ ರಾಮನಗರ, ಪ್ರಹ್ಲಾದ್ ಶೆಟ್ಟಿ, ಸುದೀಪ್ ಶೆಟ್ಟಿ ಪಟ್ಟೆ, ದಿನೇಶ್ ನಾಯ್ಕ್, ನಿತಿನ್ ಮಕ್ಕಿಗದ್ದೆಯವರು ಸಹಕರಿಸಿದ್ದಾರೆ.


