ಕೊಯಿಲ ಗ್ರಾಮದ ನಿವಾಸಿ ಕೋವಿಡ್‌ಗೆ ಬಲಿ

ಕೊಯಿಲ ಗ್ರಾಮದ ನಿವಾಸಿ ಕೋವಿಡ್‌ಗೆ ಬಲಿ

Kadaba Times News
0

ಕಡಬ ಟೈಮ್, ಕೊಯಿಲ: ಕಡಬ ತಾಲೂಕಿನ  ಕೊಯಿಲ ಗ್ರಾಮದ ಬಡಿಲ ನಿವಾಸಿ ಸುಧಾಕರ ಚೌಟ (89ವ.) ರವರು ಕೋವಿಡ್-19ಗೆ ಬಲಿಯಾಗಿದ್ದಾರೆ.

ಇವರಿಗೆ ಮೂರುವಾರಗಳ ಹಿಂದೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದಿದ್ದರು.  ಆ ಬಳಿಕ ಅವರು ಮತ್ತೆ ಅನಾರೋಗ್ಯಕ್ಕೆ ಒಳಗಾಗಿದ್ದು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ತಪಾಸಣೆ ವೇಳೆ ಅವರಿಗೆ ಮತ್ತೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದ್ದು ಚಿಕಿತ್ಸೆಗೆ ಸ್ಪಂದಿಸಸೆ ಜೂ.೪ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.

ಮೃತದೇಹದ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿಯಂತೆ ಮೃತರ ಬಡಿಲದ ಮನೆಯಲ್ಲಿ ನಡೆದಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top