ಕಡಬ: ವಿಷ ಪದಾರ್ಥ ಸೇವಿಸಿ ಅಸ್ವಸ್ಥರಾಗಿದ್ದ ಬಲ್ಯದ ವೃದ್ಧ ಮೃತ್ಯು

ಕಡಬ: ವಿಷ ಪದಾರ್ಥ ಸೇವಿಸಿ ಅಸ್ವಸ್ಥರಾಗಿದ್ದ ಬಲ್ಯದ ವೃದ್ಧ ಮೃತ್ಯು

Kadaba Times News
0

 ಕಡಬ : ವಿಷ ಪದಾರ್ಥ ಸೇವಿಸಿ ಅಸ್ವಸ್ಥರಾಗಿದ್ದ ವೃದ್ಧರೋರ್ವರು ಸಾವನ್ನಪ್ಪಿರುವ ಘಟನೆ ಕಡಬದ ಬಲ್ಯ ಗ್ರಾಮದಿಂದ ವರದಿಯಾಗಿದೆ.


ಕುಟ್ರುಪ್ಪಾಡಿ ಗ್ರಾ.ಪಂ ನ  ಬಲ್ಯ ಗ್ರಾಮದ ದೇರಾಜೆ ಮಾದೇರಿಕೆ ನಿವಾಸಿ ಕುಶಾಲಪ್ಪ ಗೌಡ(75.)ಮೃತಪಟ್ಟವರು.



ಕಳೆದ 2 ವರ್ಷಗಳಿಂದ ಮೂತ್ರಕೋಶದ ತೊಂದರೆಯಿಂದ ಬಳಲುತ್ತಿದ್ದು ಬಗ್ಗೆ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರೂ ಸರಿಯಾಗಿ ಗುಣಮುಖವಾಗದ ಕಾರಣ  ಮಾನಸಿಕವಾಗಿ ನೊಂದುಕೊಂಡಿದ್ದರು ಎನ್ನಲಾಗಿದೆ.


 ಸೆ.12ರಂದು ಒಬ್ಬರೇ ಮನೆಯಲಿದ್ದ ಸಮಯ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥರಾಗಿದ್ದರು. ತೋಟಕ್ಕೆ ಹೋಗಿದ್ದ ಅವರ ಪತ್ನಿ ಮತ್ತು ತಂಗಿ ಮನೆಗೆ ಬಂದ ವೇಳೆ ಕುಶಾಲಪ್ಪ ಗೌಡರು ಅಸ್ವಸ್ಥರಾಗಿದ್ದರು.

 ಚಿಕಿತ್ಸೆಗಾಗಿ ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ನಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.ಅಲ್ಲಿಯ ವೈದ್ಯರು ಪರೀಕ್ಷಿಸಿ  ಮೃತಪಟ್ಟಿರುವುದಾಗಿ ಧೃಡಪಡಿಸಿದ್ದಾರೆ. ಬಗ್ಗೆ ಮೃತರ ಪುತ್ರಿ ಕುಸುಮಾವತಿ  ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top