ಅಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯ ಮಕ್ಕಳ ಸಾಧನೆ: ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಮಿಂಚಲಿದ್ದಾರೆ ಈ ವಿದ್ಯಾರ್ಥಿಗಳು

ಅಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯ ಮಕ್ಕಳ ಸಾಧನೆ: ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಮಿಂಚಲಿದ್ದಾರೆ ಈ ವಿದ್ಯಾರ್ಥಿಗಳು

Kadaba Times News
0

 ಆಲಂಕಾರು:  ವಿದ್ಯಾಭಾರತಿ ದಕ್ಷಿಣ ಮಧ್ಯಕ್ಷೇತ್ರ ಮಟ್ಟದ (ಝೋನ್ ಲೆವೆಲ್) ಕಬ್ಬಡ್ಡಿ ಪಂದ್ಯಾಟ ಆಂಧ್ರಪ್ರದೇಶದ ಗುಂಟೂರಿನ ನುಟಕ್ಕಿಯಲ್ಲಿ ನಡೆದಿದ್ದ ಕರ್ನಾಟಕ ರಾಜ್ಯವನ್ನು 14 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪ್ರತಿನಿಧಿಸಿದ ಶ್ರೀ ಭಾರತಿ ಶಾಲಾ ಕಬಡ್ಡಿ  ಪಟುಗಳು ಪ್ರಥಮ ಸ್ಥಾನ ಪಡೆದಿದ್ದಾರೆ.


ಶ್ರೀ ಭಾರತಿ ಶಾಲಾ ಕ್ರೀಡಾಪಟುಗಳು 


ಕಬಡ್ಡಿ ಪಟುಗಳಾದ ಭುವಿ ಕುಂಟ್ಯಾನ, ಧನ್ಯಶ್ರೀ ಅರ್ಬಿ,ಜನನಿ ಕುಂಡಾಜೆ, ಶ್ರದ್ಧಾ ಕುಂಟ್ಯಾನ, ಸಾತ್ವಿಕ ಕೆ. ಎಸ್ ಕೆದ್ದೊಟ್ಟೆ, ಧ್ರುವಿ ಬಾಕಿಲ -ಚಾರ್ವಾಕ ,ತೃಷಾ ಕೋಡಂದೂರು-ಚಾರ್ವಾಕ, ಇವರನ್ನು ಒಳಗೊಂಡ ಬಾಲಕಿಯರ ತಂಡ ತೆಲಂಗಾಣ ವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆದಿದೆ.


ಬಾಲಕರ 14 ವಯೋಮಾನದ ಕಬ್ಬಡ್ಡಿಯಲ್ಲಿ ವಿಶ್ವಾಸ್ ದೇವಾಡಿಗ ಶರವೂರು, ದಿಕ್ಷನ್ ನಡುಮನೆ-ಆಲಂಕಾರು ತಂಡ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕಿಯರ ವಿಭಾಗದ 17 ವಯೋಮಾನದ ಕಬ್ಬಡ್ಡಿಯಯಲ್ಲಿ ವಾತ್ಸಲ್ಯ ಬಿ. ಗೌಡ ಕೊಯಿಲ,ಕೆ.ಭವ್ಯ  ಪಲ್ಲತಡ್ಕ, ಇಂಚರ ಎಲ್. ಶೆಟ್ಟಿ ಸುರುಳಿ ಇವರ ತಂಡವು ಪ್ರಥಮ ಸ್ಥಾನ ಪಡೆದಿದ್ದಾರೆ.


ಎಲ್ಲಾ ಕ್ರೀಡಾಪಟುಗಳು ಅಕ್ಟೋಬರ್ 15 ರಿಂದ 19 ತನಕ ಮಧ್ಯಪ್ರದೇಶದ ಹರ್ದಾದಲ್ಲಿ ನಡೆಯಲಿರುವ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಕಬಡ್ಡಿಗೆ ಆಯ್ಕೆಯಾಗಿದ್ದಾರೆ. ಶಾಲಾ ಆಡಳಿತ ಮಂಡಳಿ ಮಾರ್ಗದರ್ಶನದೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಮತ್ತು  ತಂಡದ ಕೋಚ್ ಮತ್ತು ಟೀಮ್ ಮೇನೆಜರ್ ಚಂದ್ರಹಾಸ ಕೆ. ಸಿ ಕುಂಟ್ಯಾನ ಮಾರ್ಗದರ್ಶನ ಮಾಡಿದ್ದಾರೆ.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top