ಕಡಬ: ತೋಟದಿಂದ ಅಡಿಕೆ ಕದ್ದವರಿಗೆ ಸ್ಥಳೀಯರಿಂದ ಥಳಿತ: ಇಬ್ಬರು ಪೊಲೀಸ್ ವಶಕ್ಕೆ

ಕಡಬ: ತೋಟದಿಂದ ಅಡಿಕೆ ಕದ್ದವರಿಗೆ ಸ್ಥಳೀಯರಿಂದ ಥಳಿತ: ಇಬ್ಬರು ಪೊಲೀಸ್ ವಶಕ್ಕೆ

Kadaba Times News
0

 

ಕಡಬ: ಇಲ್ಲಿನ ಠಾಣಾ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಕೋರಿಯರ್ ನಲ್ಲಿ ಅಡಿಕೆ ತುಂಬಿದ್ದ ಗೋಣಿ ಚೀಲ ಕದ್ದೊಯ್ಯುತ್ತಿದ್ದ  ಇಬ್ಬರನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ಅ. 9 ರಂದು ನಡೆದಿದೆ.

ಕೋರಿಯರ್ ಕೆರ್ಮಾಯಿ  ಸಮೀಪದ ತೋಟವೊಂದರಿಂದ  ಸ್ಥಳೀಯ ವ್ಯಕ್ತಿಗಳು ಎನ್ನಲಾದ ಇಬ್ಬರು  ತೋಟದಿಂದ ಅಡಿಕೆ ಕದ್ದೊಯ್ಯುತ್ತಿದ್ದ ವೇಳೆ ಪತ್ತೆ ಹಚ್ಚಿದ್ದಾರೆ.ಓರ್ವ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದು ಅತನಿಗೂ ಹಿಗ್ಗಾಮುಗ್ಗಾ ಥಳಿಸಿರುವುದಾಗಿ ತಿಳಿದು ಬಂದಿದೆ.

ಸ್ಥಳೀಯರು ಇಬ್ಬರಿಗೂ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ .  ಇಬ್ಬರನ್ನೂ ಠಾಣೆಗೆ ಕರೆದೊಯ್ಯಲಾಗಿದ್ದು ನಂತರದ ಬೆಳವಣಿಗೆಯಲ್ಲಿ ಮುಚ್ಚಳಿಕೆ ಬರೆಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.




Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top