Children's Day :ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Children's Day :ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Kadaba Times News
0

 


ಕಡಬ : ಇಲ್ಲಿನ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಸೈಂಟ್ ಜೋಕಿಮ್ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆ ಜರಗಿತು.


ಸಂಸ್ಥೆಯ ಸಂಚಾಲಕ ವಂ ಪ್ರಕಾಶ್ ಪೌಲ್ ಡಿಸೋಜ ವಿದ್ಯಾರ್ಥಿ ಪ್ರತಿನಿಧಿಗಳ ಜತೆ ದೀಪ ಬೆಳಗಿಸಿ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ವಿದ್ಯಾರ್ಥಿ ಸಾಧಕರಾದ ವೇದಿಕ್ ಕೌಶಲ್, ಸಾನಿದ್ಯ ರೈ, ರಕ್ಷಕ -ಶಿಕ್ಷಕ ಸಂಘದ ಉಪಾಧ್ಯಕ್ಷ ಶ್ರೀ ಗಿರಿಧರ್ ರೈ, ಪ್ರಾಂಶುಪಾಲರಾದ ಅಮಿತ್ ಪ್ರಕಾಶ್ ರೋಡ್ರಿಗಸ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ದಕ್ಷಾ ಉಪಸ್ಥಿತರಿದ್ದರು.


ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರು ಹಾಡು, ನೃತ್ಯ,ಪ್ರಹಸನಗಳ ಮೂಲಕ ರಂಜಿಸಿದರು. ಶಿಕ್ಷಕಿ ಫಿಲೋಮಿನಾ ಸ್ವಾಗತಿಸಿ, ಅನುಷಾ ವಂದಿಸಿದರು. ವಾಣಿ ಕಾರ್ಯಕ್ರಮ    ನಿರೂಪಿಸಿದರು.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top