Inspirational Stories: ಅನಾರೋಗ್ಯಕ್ಕೆ ಒಳಗಾದ ಗ್ರಾಮದ ಮಹಿಳೆಗೆ ವೈದ್ಯಕೀಯ ವೆಚ್ಚಕ್ಕಾಗಿ ಸೇವಾಧನ ನೀಡಿದ ಬಲ್ಯ ಶ್ರೀ ಉಮಾಮಹೇಶ್ವರಿ ಪರಿವರ್ತನಾ ತಂಡ

Inspirational Stories: ಅನಾರೋಗ್ಯಕ್ಕೆ ಒಳಗಾದ ಗ್ರಾಮದ ಮಹಿಳೆಗೆ ವೈದ್ಯಕೀಯ ವೆಚ್ಚಕ್ಕಾಗಿ ಸೇವಾಧನ ನೀಡಿದ ಬಲ್ಯ ಶ್ರೀ ಉಮಾಮಹೇಶ್ವರಿ ಪರಿವರ್ತನಾ ತಂಡ

Kadaba Times News
0

 ಬಲ್ಯ ಶ್ರೀ ಉಮಾಮಹೇಶ್ವರಿ ಪರಿವರ್ತನಾ ತಂಡ


 ಕಡಬ:ಸಾಮಾಜಿಕ ಕೆಲಸಗಳ ಮೂಲಕ ಗುರುತಿಸಿಕೊಂಡಿರುವ  ಬಲ್ಯ ಶ್ರೀ ಉಮಾಮಹೇಶ್ವರಿ ಪರಿವರ್ತನಾ ತಂಡವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಆರ್ಥಿಕ ನೆರವು ನೀಡಿದೆ.


 ಗ್ರಾಮದ ನಿವಾಸಿ ಅನಾರೋಗ್ಯಕ್ಕೆ ಒಳಗಾಗಿರುವ   ರೇವತಿ ಮತ್ರಾಡಿ ಇವರಿಗೆ  ವೈದ್ಯಕೀಯ ವೆಚ್ಚಕ್ಕಾಗಿ ₹15000/- ಸೇವಾಧನವನ್ನು ತಂಡ ಹಸ್ತಾಂತರಿಸಿದೆ.


ಸಮಾನ ಮನಸ್ಕರ ತಂಡ ಇದಾಗಿದ್ದು ಗ್ರಾಮದಲ್ಲಿ ತೀರ ನೊಂದಿರುವ, ಅಸಹಾಯಕರಿಗೆ ಈ ತಂಡ ನೆರವು ನೀಡುವ ಯೋಜನೆ ರೂಪಿಸಿಕೊಂಡಿದೆ.  ಇಂತಹ ಸೇವಾ ಮನೋಭಾವ, ಸಹಕಾರದ ಮನಸ್ಥಿತಿ ಎಲ್ಲರಿಗೂ ಬರಬೇಕು ಎನ್ನುವ ಸದಾಶಯದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ನಮ್ಮ ತಂಡದ ಕಾರ್ಯವನ್ನು ಹಂಚಿಕೊಳ್ಳುತ್ತಿದ್ದೇವೆ  ಎಂದು ತಂಡದ ಸಕ್ರಿಯ ಸದಸ್ಯ ಜಾಕಿ ಉಮೇಶ ಬಂಗೇರರವರು ಕಡಬ ಟೈಮ್ಸ್ ಗೆ ತಿಳಿಸಿದ್ದಾರೆ.


ಸಹಾಯಧನ ಹಸ್ತಾಂತರದ ಸಂದರ್ಭದಲ್ಲಿ  ಧನಂಜಯ ಕೊಡಂಗೆ.  ಹರೀಶ್  ಡಿ.ಎಚ್,  ವಾಣಿ ನಾಗೇಶ್ , ಗಣೇಶ್ . ಕೆ , ಸಂಕೇತ್  , ವಂದನ್ ಜೊತೆಗಿದ್ದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top