ಗುಂಡ್ಯದಲ್ಲಿ ನ.15ರಂದು ಕಸ್ತೂರಿರಂಗನ್ ವರದಿ ವಿರೋಧಿಸಿ ಪ್ರತಿಭಟನೆ: ಬೆಂಬಲ ಸೂಚಿಸಿ ಕರೆ ನೀಡಿದ ಸಂಘ-ಸಂಸ್ಥೆಗಳ ಸಂಘಟಕರು

ಗುಂಡ್ಯದಲ್ಲಿ ನ.15ರಂದು ಕಸ್ತೂರಿರಂಗನ್ ವರದಿ ವಿರೋಧಿಸಿ ಪ್ರತಿಭಟನೆ: ಬೆಂಬಲ ಸೂಚಿಸಿ ಕರೆ ನೀಡಿದ ಸಂಘ-ಸಂಸ್ಥೆಗಳ ಸಂಘಟಕರು

Kadaba Times News
0

 

ಸತೀಶ್ ಕೆ ಐತ್ತೂರು,ಸುರೇಶ್ ಬೈಲು , ಗೋಪಾಲಕೃಷ್ಣ ಬಿ

ಕಡಬ: ಕಸ್ತೂರಿರಂಗನ್ ವರದಿ ವಿರೋಧಿಸಿ ನ.15ರಂದು ಗುಂಡ್ಯದಲ್ಲಿ ನಡೆಯುವ ಪ್ರತಿಭಟನೆಗೆ  ಕಡಬದ ಹಲವು ಮುಖಂಡರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.


ಕಡಬ ವಲಯ ಹವ್ಯಕ ಪ್ರತಿನಿಧಿ ಪರಿಷತ್ ಸಂಪೂರ್ಣ ಬೆಂಬಲ ಘೋಷಿಸಿದ್ದು ಪ್ರತಿಯೊಬ್ಬರು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕಡಬ ವಲಯ ಹವ್ಯಕ ಪ್ರತಿನಿಧಿ ಪರಿಷತ್‌ನ ಅಧ್ಯಕ್ಷ ಗೋಪಾಲಕೃಷ್ಣ ಬಿ. ಅವರು ಕರೆ ನೀಡಿದ್ದಾರೆ.


ಕಡಬ ತಾಲೂಕು ಬಿಲ್ಲವ ಸಂಚಾಲನ ಸಮಿತಿಯ ಪ್ರಧಾನ ಸಂಚಾಲಕರು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಕೆ ಐತ್ತೂರು  ಅವರು ಪಶ್ಚಿಮ ಘಟ್ಟದ ತಪ್ಪಲಿನ ಅಂಚಿನಲ್ಲಿರುವ ಗ್ರಾಮಗಳಿಗೆ ಹಾಗೂ ರೈತರ ಕೃಷಿ ಜಾಗಗಳಿಗೆ ಕಸ್ತೂರಿ ರಂಗನ್ ವರದಿಯಿಂದ ಆಗುವ ತೊಂದರೆಗಳ  ನಡೆಯಲಿರುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.


ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಅವರು ಕರೆ ನೀಡಿ , ವರದಿ ಜಾರಿಗೆ ತುದಿಕಾಲಲ್ಲಿ ನಿಂತಿರುವ ವ್ಯವಸ್ಥೆಯ ವಿರುದ್ದ ನಾವು ಸಂಘಟಿತವಾಗಿ ಹೋರಾಟ ಮಾಡಬೇಕಾಗಿತ್ತು ಹಿನ್ನಲೆಯಲ್ಲಿ .15ರಂದು ಗುಂಡ್ಯದಲ್ಲಿ ನಡೆಯುವ ಬೃಹತ್ ಪ್ರತಿಭಟನೆಗೆ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಸಂಪೂರ್ಣ ಬೆಂಬಲ ಇದ್ದು, ಸಮುದಾಯದವರು ಒಂದು ದಿನದ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top