ಪುತ್ತೂರು ಎಸಿ ಸೂಚನೆಯಂತೆ ಕುಕ್ಕೆ ದೇಗುಲದ ಸಿಬ್ಬಂದಿಗಳಿಗೆ ಮೃದು ಕೌಶಲ್ಯ ತರಬೇತಿ ಕಾರ್ಯಕ್ರಮ

ಪುತ್ತೂರು ಎಸಿ ಸೂಚನೆಯಂತೆ ಕುಕ್ಕೆ ದೇಗುಲದ ಸಿಬ್ಬಂದಿಗಳಿಗೆ ಮೃದು ಕೌಶಲ್ಯ ತರಬೇತಿ ಕಾರ್ಯಕ್ರಮ

Kadaba Times News
0



ಕುಕ್ಕೆ ಸುಬ್ರಹ್ಮಣ್ಯ; ಕುಕ್ಕೆ ದೇಗುಲದ ಆಡಳಿತಾಧಿಕಾರಿ,ಸಹಾಯಕ ಆಯುಕ್ತರೂ ಆಗಿರುವ  ಜುಬಿನ್ ಮಹಾಪಾತ್ರ ಅವರ ನಿರ್ದೇಶನದಲ್ಲಿ  ದೇಗುಲದ  ಸಿಬ್ಬಂದಿಗಳಿಗೆ ಮೃದು ಕೌಶಲ್ಯ ತರಬೇತಿ ಕಾರ್ಯಕ್ರಮ ನವೆಂಬರ್ 15ರಂದು ನಡೆಯಿತು.


ಕುಕ್ಕೆ ಸುಬ್ರಹ್ಮಣ್ಯ  ಪ್ರಖ್ಯಾತಿ ಪಡೆದ ಕ್ಷೇತ್ರವಾಗಿದ್ದು ದೇಶ ವಿದೇಶಗಳಿಂದ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜಾ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಭಕ್ತರ ಜೊತೆ ಉತ್ತಮ ರೀತಿಯಲ್ಲಿ ವ್ಯವಹರಿಸಲು  ದೇಗುಲದ  ಎ.ಇ.ಒ ಹಾಗೂ ದೇವಸ್ಥಾನದ ಎಲ್ಲಾ ಕಾಯಂ ಮತ್ತು ಮೇಲ್ವಿಚಾರಣಾ ಸಿಬ್ಬಂದಿಗಳಿಗೆ ,ಉಪ್ಪಿನಂಗಡಿಯ ಜಿ.ಎಫ್‌.ಜಿ.ಸಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ, ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಮಾಸ್ಟರ್ ಟ್ರೈನರ್ ಆಗಿರುವ ನಂದೀಶ್ ಅವರು  ತರಬೇತಿ ನೀಡಿದರು.


ಇದು ಎರಡನೇ ಹಂತದ ತರಬೇತಿ ಕಾರ್ಯಕ್ರಮ ಆಗಿದ್ದು ಮುಂದಿನ ದಿನಗಳಲ್ಲಿ ಮೊದಲನೇ ಹಂತದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಹಾಗೂ ದೇವಾಲಯದ ಆಡಳಿತ ಅಧಿಕಾರಿಗಳು ಜಂಟಿಯಾಗಿ ದೇವಾಲಯದ ಭದ್ರತಾ ಸಿಬ್ಬಂದಿಗಳಿಗೆ ವಿಶಿಷ್ಟವಾದ ಶಿಸ್ತು ತರಬೇತಿಯನ್ನು ಏರ್ಪಡಿಸಲಾಗಿತ್ತು. 


ಮುಂದಿನ ದಿನಗಳಲ್ಲಿ, ಎಲ್ಲಾ ಹೊರಗುತ್ತಿಗೆ ಸಿಬ್ಬಂದಿಗಳಿಗೂ ಮೂರನೇ ಸುತ್ತಿನ ತರಬೇತಿ ಯೋಜಿಸಲಾಗಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಅಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top