ಕಾಂಗ್ರೆಸ್ ಮುಖಂಡನನ್ನೇ ನಾಲ್ಕು ಬಾರಿ ಅಳೆದಾಡಿಸಿದ ಕಡಬದ ಸರ್ವೇಯರ್ : ಯಾವ ಅರ್ಜಿ ಕೊಟ್ಟಿದ್ದರು?

ಕಾಂಗ್ರೆಸ್ ಮುಖಂಡನನ್ನೇ ನಾಲ್ಕು ಬಾರಿ ಅಳೆದಾಡಿಸಿದ ಕಡಬದ ಸರ್ವೇಯರ್ : ಯಾವ ಅರ್ಜಿ ಕೊಟ್ಟಿದ್ದರು?

Kadaba Times News
0

 

ಕಾಂಗ್ರೆಸ್ ಮುಖಂಡ ವೆಂಕಪ್ಪ ಗೌಡ

ಕಡಬ: ನಾನು ಕೊಟ್ಟ ಅರ್ಜಿಗೆ   ಕಡಬದ ಸರ್ವೆಯರು ನಾಲ್ಕು ತಿಂಗಳು ಕುಣಿಸಿದ್ದಾರೆ ಎಂದು ಕೆಪಿಸಿಸಿ  ಮಾಜಿ ಕಾರ್ಯದರ್ಶಿ ಯಂ. ವೆಂಕಪ್ಪ ಗೌಡ ತನಗಾದ ಅನುಭವ ಹಂಚಿಕೊಂಡಿದ್ದಾರೆ.


ಇತ್ತೀಚೆಗೆ ಗುಂಡ್ಯದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ .ನಮಗೆ ಉಪಗ್ರಹ ಆಧಾರಿತ ಸರ್ವೆಯ ಅಗತ್ಯವಿಲ್ಲ,  ಮ್ಯಾನುವೆಲ್ ಸರ್ವೆಯ ಅಗತ್ಯವಿದೆ ಎನ್ನುತ್ತಾ ಜಂಟಿ ಸರ್ವೆ ಮಾಡಬೇಕೆಂದರೆ ಅದು ನಮ್ಮ ಸರ್ವೇಯರ್   ಮಾಡ್ತರೆ ಎಂದು ನಾನು ನಂಬುವುದಿಲ್ಲ, ನಾನೊಬ್ಬ ವಕೀಲನಾಗಿದ್ದು   ಪಟ್ಟಾ ಜಾಗದ ಪ್ಲಾಟಿಂಗ್ ಮಾಡಲು ಅರ್ಜಿಯನ್ನು  ಕೊಟ್ಟಿದ್ದೆ ,  ನಾಲ್ಕು ತಿಂಗಳು ಕಡಬದ ಸರ್ವೆಯರು  ನನ್ನನ್ನು  ಕುಣಿಸಿದ್ದಾರೆ.   ಈ ಸರ್ವೇಯರ್ ನ  ಜೀವಮಾನದಲ್ಲಿ ಜಂಟಿ ಸರ್ವೆ ಮಾಡಲು ಸಾಧ್ಯವಿಲ್ಲ ಎಂದ್ದಿದ್ದಾರೆ.


ಅಲ್ಲದೆ ನಾಲು ದೂರದ ಸುಳ್ಯದಿಂದ ನಾಲ್ಕು ಬಾರಿ ಕಡಬಕ್ಕೆ ಬಂದಿದ್ದೇನೆ,   ನಮ್ಮದೇ ಸರ್ಕಾರವಿದೆ ನಾನು ಭಾಗಿಯಾಗಿದ್ದೇನೆ ,  ನೀವು ನನ್ನಂತವನಿಗೆ ಕೆಲಸ ಮಾಡಿ ಕೊಟ್ಟಿಲ್ಲ ಅಂದರೆ ಪಾಪದವರಿಗೆ ನಿಮ್ಮಿಂದ ಕೆಲಸ ಮಾಡಿಕೊಡಲು ಸಾಧ್ಯನಾ ಎಂದು ಪ್ರಶ್ನಿಸಿದ್ದೆ ಎಂದು ಭಾಷಣದಲ್ಲಿ ಹೇಳಿದ್ದರಾರೆ.


ಮುಂದುವರಿದು ಜಿಲ್ಲಾ ಮಂತ್ರಿಗಳು ಬಂದಾಗ ನಿಮ್ಮ ವಿರುದ್ದ ದೂರು ನೀಡುತ್ತೇನೆ, ಸರ್ವೆ ಮಾಡಿ ಕೊಡಿ ಎಂದು ಹೇಳಿದ್ದೇನೆ ಎಂದಿದ್ದಾರೆ. 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top