ಕುಕ್ಕೆ ದೇಗುಲದ ಆನೆ ಯಶಸ್ವಿಯ ಉಪಸ್ಥಿತಿಯಲ್ಲಿ ಬ್ಯಾಂಡ್‌, ವಾಲಗದೊಂದಿಗೆ ಕಾಂಚಿ ಕಾಮಕೋಟಿ ಪೀಠದ ಸ್ವಾಮೀಜಿಗೆ ಸ್ವಾಗತ

ಕುಕ್ಕೆ ದೇಗುಲದ ಆನೆ ಯಶಸ್ವಿಯ ಉಪಸ್ಥಿತಿಯಲ್ಲಿ ಬ್ಯಾಂಡ್‌, ವಾಲಗದೊಂದಿಗೆ ಕಾಂಚಿ ಕಾಮಕೋಟಿ ಪೀಠದ ಸ್ವಾಮೀಜಿಗೆ ಸ್ವಾಗತ

Kadaba Times News
0
ಕುಕ್ಕೆ ಕ್ಷೇತ್ರಕ್ಕೆ ಭೇಟಿ ನೀಡಿದ ಸ್ವಾಮೀಜಿಗಳು (KADABA TIMES)


 ಕುಕ್ಕೆ  ಸುಬ್ರಹ್ಮಣ್ಯ: ಕಾಂಚಿ ಕಾಮಕೋಟಿ ಪೀಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದ್ದಾರೆ.


ಕ್ಷೇತ್ರಕ್ಕೆ ಆಗಮಿಸಿದ ಸ್ವಾಮೀಜಿ ಅವರನ್ನು ದೇವಸ್ಥಾನದ ವತಿಯಿಂದ ದೇಗುಲದ ಆನೆ ಯಶಸ್ವಿ ಉಪಸ್ಥಿತಿಯಲ್ಲಿ ಬ್ಯಾಂಡ್‌, ವಾಲಗದೊಂದಿಗೆ ಸ್ವಾಗತಿಸಲಾಯಿತು. ಕಾಶಿಕಟ್ಟೆಯಿಂದ ಮೆರವಣಿಗೆಯಲ್ಲಿ ದೇವಸ್ಥಾನದ ವರೆಗೆ ಕರೆತರಲಾಯಿತು.



ದೇಗುಲದ ರಾಜಗೋಪುರದ ಬಳಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಸ್ವಾಮೀಜಿಯವರನ್ನು ಸ್ವಾಗತಿಸಿದರು . ಸ್ವಾಮೀಜಿ  ದೇವಾಲಯದಲ್ಲಿನ ದರ್ಪಣ ತೀರ್ಥ ನದಿಗೆ ತೆರಳಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

 


ಈ ಸಂದರ್ಭದಲ್ಲಿ  ದೇವಸ್ಥಾನದ ಅಧಿಕಾರಿಗಳು, ಸಿಬಂದಿ ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top