ಕೊಯಿಲ ಗ್ರಾ.ಪಂ ವ್ಯಾಪ್ತಿ: ಪ್ರಕರಣ ದಾಖಲಿಸುವ ಎಚ್ಚರಿಕೆಯ ಬಳಿಕ ಕಸ ಎಸೆದ ಇಬ್ಬರು ಹತ್ತು ಸಾವಿರ ದಂಡ ಕಟ್ಟಿದ್ರು!

ಕೊಯಿಲ ಗ್ರಾ.ಪಂ ವ್ಯಾಪ್ತಿ: ಪ್ರಕರಣ ದಾಖಲಿಸುವ ಎಚ್ಚರಿಕೆಯ ಬಳಿಕ ಕಸ ಎಸೆದ ಇಬ್ಬರು ಹತ್ತು ಸಾವಿರ ದಂಡ ಕಟ್ಟಿದ್ರು!

Kadaba Times News
0

 

ಕಸ ಎಸೆದ ಸ್ಥಳದಲ್ಲಿ ಕೊಯಿಲ ಗ್ರಾ.ಪಂ ಅಧಿಕಾರಿಗಳು

ಮನೆಗೆ ಇಂಟರ್‌ಲಾಕ್ ತಂದ ಬಿಲ್, ಮಸೀದಿಯಿಂದ ಬಂದ ನೋಟಿಸ್ ಕಸ ಎಸೆದವರ ಪತ್ತೆಗೆ ಸಹಕಾರಿ ಆಯ್ತು 


ಕಡಬ ಟೈಮ್,ಕೊಯಿಲ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಡಿಬಾಗಿಲು ಹಾಗೂ ಆತೂರುಬೈಲು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆದವರನ್ನು ಕೊಯಿಲ ಗ್ರಾ.ಪಂ  ತ್ಯಾಜ್ಯ ಎಸೆದವರಿಗೆ ದಂಡ ವಿಧಿಸುವ ಎಚ್ಚರಿಕೆಯ ಸಂದೇಶ ನೀಡಿದೆ.


ಜನರಿಗೆ ಜಾಗೃತಿಮೂಡಿಸುತ್ತಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವ ಕಿಡಿಗೇಡಿಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ, ಇದರ ಒಂದು ಉದಾಹರಣೆ ಕೊಯಿಲ ಗ್ರಾಮ ಪಂಚಾಯಿತಿ ನಡೆಸಿದ ಕಾರಾಚರಣೆಯಲ್ಲಿ ಪತ್ತೆಯಾದ ತ್ಯಾಜ್ಯದ ರಾಶಿಗಳು.


ಗಂಡಿಬಾಗಿಲು ಹಾಗೂ ಆತೂರುಬೈಲು ಎಂಬಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆದಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪಂಚಾಯತ್ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿದಾಗ ಕಸದ ರಾಶಿಕಂಡು ಬಂದಿದೆ.


ತ್ಯಾಜ್ಯದಲ್ಲಿ ಕೆಮ್ಮಾರದ ಒಬ್ಬರ ಮನೆಗೆ ಇಂಟರ್‌ಲಾಕ್ ತಂದ ಬಿಲ್ ಹಾಗೂ ನಂಬರ್ ಪತ್ತೆಯಾಯಿತು. ಅಂತೆಯೇ ಆತೂರು ಬೈಲಿನಲ್ಲಿ ತ್ಯಾಜ್ಯದಲ್ಲಿ ವ್ಯಕ್ತಿಯೊಬ್ಬರಿಗೆ ಮಸೀದಿಯಿಂದ ಬಂದ ನೋಟಿಸ್ ಪತ್ತೆಯಾಗಿದ್ದು ಅವರಲ್ಲಿ ವಿಚಾರಿಸಿದಾಗ ಪಕ್ಕದ ಮನೆಯವರು ಕಾರ್ಯಕ್ರಮವೊಂದನ್ನು ನಡೆಸಿ ಅಲ್ಲಿ ಊಟೋಪಚಾರಕ್ಕೆ ಬಳಸಿದ ತ್ಯಾಜ್ಯ ಎಸೆದಿರುವುದು ಬೆಳಕಿಗೆ ಬಂದಿದೆ.


ಈ ಬಗ್ಗೆ  ವಿಚಾರಿಸಿದರೆ ಆರಂಭದಲ್ಲಿ ನಿರಾಕರಿಸಿದರೂ ಬಳಿಕ ಎಸೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಪಂಚಾಯಿತಿಗೆ ಬಂದು ದಂಡ ಕಟ್ಟಬೇಕು ಎಂದು ಸೂಚಿಸಿದರೂ ಕ್ಯಾರೇ ಅನ್ನಲಿಲ್ಲ. ದಂಡ ಕಟ್ಟದಿದ್ದರೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟು ನೋಟಿಸ್ ನೀಡಿದ ಬಳಿಕ ಬುಧವಾರ ಪಂಚಾಯಿತಿ ಕಚೇರಿಗೆ ಬಂದು ಇಬ್ಬರೂ ತಲಾ 5,000 ರೂ.ನಂತೆ ಒಟ್ಟು 10,000 ರೂ. ದಂಡ ಕಟ್ಟಿದ್ದಾರೆ. ಇದರಿಂದಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯವವರಿಗೆ ಎಚ್ಚರಿಗೆ ನೀಡುವ ಸಂದೇಶವನ್ನು ಅಭಿವೃದ್ಧಿ ಅಧಿಕಾರಿ ಸಂದೇಶ್ ರವಾನಿಸಿದ್ದಾರೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top